ನಮ್ಮ ಪಕ್ಷದವರೊಬ್ಬರನ್ನು ಎಂಎಲ್ ಸಿ ಮಾಡಲು ಸಿಎಂ ಕುಮಾರಸ್ವಾಮಿ ಅವರು ಬೇಡಿಕೆ ಇಟ್ಟಿರುವ ವಿಡಿಯೋ ಸೋಮವಾರ ಕಲಾಪದಲ್ಲಿ ರಿಲೀಸ್ :ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ – Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು ಸಿಎಂ ಕುಮಾರಸ್ವಾಮಿ ತಮ್ಮ ಪಕ್ಷದವರೊಬ್ಬರಿಗೆ 25 ಕೋಟಿ ರೂಪಾಯಿ ಆಫರ್ ಮಾಡಿರುವ ವಿಡಿಯೋ ನಮ್ಮಲ್ಲಿದ್ದು ಅದನ್ನು ಸೋಮವಾರ ಬಿಎಸ್ ಯಡಿಯೂರಪ್ಪ ಸದನದಲ್ಲಿಯೇ ಬಿಡುಗಡೆ ಮಾಡಲಿದ್ದಾರೆ ಎಂದು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಮವಾರ ಸ್ಪೀಕರ್ ಮುಂದೆ ವಿಡಿಯೋ ರಿಲೀಸ್ ಮಾಡುತ್ತೇವೆ ..ಆ ವಿಡಿಯೋವನ್ನು ಸದನದಲ್ಲೇ ಬಿಎಸ್ ಯಡಿಯೂರಪ್ಪ ಬಿಡುಗಡೆ ಮಾಡ್ತಾರೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

ನಿನ್ನೆ ಕುಮಾರಸ್ವಾಮಿಯವರು ಬಿಡುಗಡೆ ಮಾಡಿದ ಆಡಿಯೋ ಸಿಡಿ ಎಲ್ಲಿ ಸಿದ್ದಪಡಿಸಿದ್ದು, ಕಂಠೀರವಾ ಸ್ಟುಡಿಯೋದಲ್ಲಿ ಸಿದ್ದವಾಗಿದ್ದಾ ಎಂಬುದನ್ನುನ ತನಿಖೆಗೆ ಒಳಪಡಿಸಲಿ. ಒಬ್ಬ ಮುಖ್ಯಮಂತ್ರಿಯಾಗಿ ಇಂಥ ಕೀಳು ರಾಜಕೀಯತಂತ್ರಕ್ಕೆ ಇಳಿಯಬಾರದಿತ್ತು ಎಂದು ಹೇಳಿದರು.