ನಮ್ಮ ಪ್ರಧಾನಿ ಏನು ಮಾಡಿದರೂ ಆ ಕೆಲಸದ ಹಿಂದೆ ದೂರಾಲೋಚನೆ ಇರುತ್ತದೆ : ಎಸ್. ಎಲ್. ಭೈರಪ್ಪ -Vishwanews24

Featured, ರಾಜ್ಯ ನ್ಯೂಸ್

ಮೈಸೂರು, : “ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏನು ಮಾಡಿದರೂ ಆ ಕೆಲಸದ ಹಿಂದೆ ದೂರಾಲೋಚನೆ ಇರುತ್ತದೆ. ಜತೆಗೆ ಪ್ರಾಮುಖ್ಯ ಇರುತ್ತದೆ. ಮೋದಿ ಅವರಿಗೆ ಸಾಕಷ್ಟು ಲೋಕಾನುಭವ ಇದೆ” ಎಂದು ಸಾಹಿತಿ ಹಾಗೂ ಈ ಬಾರಿಯ ಮೈಸೂರು ದಸರಾ ಉದ್ಘಾಟಕ ಎಸ್. ಎಲ್. ಭೈರಪ್ಪ ಭಾನುವಾರ ಅಭಿಪ್ರಾಯ ಪಟ್ಟರು.

ಸಿದ್ದರಾಮಯ್ಯನವರ ಕಾಲದಲ್ಲಿ ಗಿರೀಶ್ ಕಾರ್ನಾಡ್ ದಸರಾ ಉದ್ಘಾಟಿಸಿದಾಗ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಅವರು, ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದು, ಮಾತನಾಡಿದರು. ನರೇಂದ್ರ ಮೋದಿ ಅವರ ಅಲೋಚನೆಗಳಿಗೆ ಭಾರತದಲ್ಲಿ ಮಾತ್ರ ಅಲ್ಲ, ವಿಶ್ವಮಟ್ಟದಲ್ಲಿ ಪ್ರಾಮುಖ್ಯವಿದೆ ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಕಾದಂಬರಿಕಾರರಾದ ಭೈರಪ್ಪ ಹೇಳಿದರು.