ನರೇಂದ್ರ ಮೋದಿಯವರ ಅಧಿಕಾರದಲ್ಲಿ ಭಾರತ ದೇಶ ಆತಂಕದಲ್ಲಿದೆ ಹಾಗಾಗಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಪ್ರಮುಖ ಗುರಿ : ದಿನೇಶ್ ಗುಂಡುರಾವ್

Featured, ರಾಜ್ಯ ನ್ಯೂಸ್

ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನೇಶ್ ಗುಂಡುರಾವ್ ಸಭೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದು ಘೋಷಣೆ ಮಾಡಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಡಾ.ಪರಮೇಶ್ವರ್ ಅವರು ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಡಾ.ಜಿ ಗುಂಡೂರಾವ್ ಗೆ ಬಾವುಟ ಕೊಡುವುದರ ಮೂಲಕ ಅಧಿಕಾರ ಹಸ್ತಾಂತರ ಮಾಡಿ, ರಾಜ್ಯದ ಎಲ್ಲಾ ಕಾರ್ಯಕರ್ತರ ಶಕ್ತಿಯನ್ನು ನಿಮಗೆ ಕೊಡ್ತಾ ಇದ್ದೇವೆ, ನೀವು ಪಕ್ಷವನ್ನು ಮತ್ತಷ್ಟು ಬಲಪಡಿಸಿ ಎಂದು ಸಲಹೆ ನೀಡಿದರು.

 ಅಧಿಕಾರ ಸ್ವೀಕರಿಸಿದ ದಿನೇಶ್ ಗುಂಡುರಾವ್ ನರೇಂದ್ರ ಮೋದಿಯವರ ಅಧಿಕಾರದಲ್ಲಿ ಭಾರತ ದೇಶ ಆತಂಕದಲ್ಲಿದೆ, ನಮ್ಮ ಪ್ರಮುಖ ಗುರಿ ಬಿಜೆಪಿಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವುದು ಎಂದು ತಿಳಿಸಿದರು.

ರಾಹುಲ್ ಗಾಂಧಿಯವರು ನನ್ನ ಮೇಲೆ ಬಹಳ ನಂಬಿಕೆ ಇಟ್ಟು ನನಗೆ ಈ ಜವಬ್ದಾರಿಯನ್ನು ನೀಡಿದ್ದಾರೆ, ಪಕ್ಷದ ಸಿದ್ದಾಂತ ಮತ್ತು ಪಕ್ಷದ ಕೆಲಸ ಕಾರ್ಯಗಳನ್ನು ಜನರಿಗೆ ತಲುಪಿಸಬೇಕು ಎಂದು ಸೂಚನೆ ನೀಡಿದರು.

ರಾಜ್ಯದ ೨೨೪ ಕ್ಷೇತ್ರಗಳಲ್ಲೂ ಕಾಂಗ್ರೇಸ್ ಪಕ್ಷವನ್ನು ಬಲಪಡಿಸಬೇಕು ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನವನ್ನು ಗಳಿಸಲು ಎಲ್ಲರೂ ಒಟ್ಟಾಗಿ ಪ್ರಯತ್ನ ನಡೆಸಬೇಕು ಡಿಕೆಶಿ ತಿಳಿಸಿದರು..