ನಾಗಮಂಗಲ ಗಲಭೆ : ಸಿಎಂ ಕುರ್ಚಿಯಿಂದ ಕೆಳಗೆ ಇಳಿಸಲು ಕಾಂಗ್ರೆಸ್ ಪಕ್ಷವೇ ನಡೆಸಿರೊ ಷಡ್ಯಂತ್ರ : ಎಚ್ಡಿ ಕುಮಾರಸ್ವಾಮಿ – vishwanews24
ನಾಗಮಂಗಲದ ಇಡೀ ಘಟನೆ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮ : ಎಚ್ಡಿ ಕುಮಾರಸ್ವಾಮಿ
ಮಂಡ್ಯ: ಗಣೇಶ ವಿಸರ್ಜನೆ ವೇಳೆ ನಾಗಮಂಗಲದ ಗಲಭೆ ವಿಚಾರಕ್ಕೆ ಸಂಬಂಧಿಸಿಂತೆ ಶುಕ್ರವಾರ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ನಾಗಮಂಗಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಗಮಂಗಲದ ಇಡೀ ಘಟನೆ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮವಷ್ಟೇ. 1990ರಲ್ಲಿ ವಿರೇಂದ್ರ ಪಾಟೀಲರನ್ನು ಸಿಎಂ ಕುರ್ಚಿಯಿಂದ ಕೆಳಗೆ ಇಳಿಸಲು ಗಲಭೆ ನಡೆಸಿದಂತೆ ಸಿದ್ದರಾಮಯ್ಯರನ್ನ ಸಿಎಂ ಕುರ್ಚಿಯಿಂದ ಕೆಳಗೆ ಇಳಿಸಲು ಕಾಂಗ್ರೆಸ್ನಲ್ಲೇ ನಡೆಸಿರುವ ಸಂಚು ಎಂದು ಹೊಸ ಬಾಂಬ್ ಹಾಕಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗದಲ್ಲಿ ನಡೆದಿರುವ ಕೋಮು ದಳ್ಳೂರಿ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ನಿನ್ನೆ ಗುರುವಾರವಷ್ಟೆ ಬಿಜೆಪಿ ನಿಯೋಗ ಭೇಟಿ ನೀಡಿ ಹೋಗಿತ್ತು. ಆ ವೇಳೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಬಿಜೆಪಿ ನಾಯಕರು ನಾಗಮಂಗಲದ ಗಲಭೆಯನ್ನ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಗುಡುಗಿದ್ದರು.
ಕ್ರೇಜಿವಾಲ್ಗೆ ಜಾಮೀನು – ಅಂತಿಮವಾಗಿ ಸತ್ಯವೇ ಗೆಲ್ಲುವುದು : ಸಿಎಂ ಸಿದ್ದರಾಮಯ್ಯ – vishwanews24
ಶುಕ್ರವಾರ ನಾಗಮಂಗಲಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಗಲಭೆಯಲ್ಲಿ ಹಾನಿಗೊಳಗಾಗಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ತಮ್ಮ ತಮ್ಮ ಅಂಗಡಿ ಮುಂಗ್ಗಟ್ಟುಗಳನ್ನು ಕಳೆದುಕೊಂಡಿದ್ದ ಜನರು ಕುಮಾರಸ್ವಾಮಿ ಬಳಿ ತಮ್ಮ ನೋವನ್ನು ತೊಡಿಕೊಂಡರು. ನಾಗಮಂಗಲದ ಕೋಮು ದಳ್ಳುರಿಯನ್ನು ಕಣ್ಣಾರೆ ಕಂಡ ಕುಮಾರಸ್ವಾಮಿ ಇಡೀ ಗಲಭೆ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮ ಎಂದು ನೇರವಾಗಿ ಆರೋಪ ಮಾಡಿದರು. 1990 ರಲ್ಲಿ ವೀರೇಂದ್ರ ಪಾಟೀಲರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಗಲಭೆ ನಡೆಸಿದಂತೆ ಸಿದ್ದರಾಮಯ್ಯರನ್ನು ಕೆಳಗೆ ಇಳಿಸಲು ಕಾಂಗ್ರೆಸ್ ಪಕ್ಷವೇ ನಡೆಸಿರೊ ಷಡ್ಯಂತ್ರ ಇದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವ ತನಿಖೆಯನ್ನಾದರು ಮಾಡಲಿ ಎಂದು ಗುಡುಗಿದರು.
ದ್ವಿತೀಯ ಪಿಯು ಅಂತಿಮ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ : ಪರೀಕ್ಷಾ ಅವಧಿ 15 ನಿಮಿಷ ಕಡಿತ – vishwanews24
