ನಾಟಕ ಪ್ರದರ್ಶನ ವೇಳೆ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಪಾತ್ರಧಾರಿ ಸಾವು – Vishwanews24
ನಾಟಕ ಪ್ರದರ್ಶನ ವೇಳೆ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಪಾತ್ರಧಾರಿ ಸಾವು
ಬೆಂಗಳೂರು : ಕುರುಕ್ಷೇತ್ರ ನಾಟಕ ಪ್ರದರ್ಶನ ವೇಳೆಯೇ ಕುಸಿದು ಬಿದ್ದು ಪಾತ್ರಧಾರಿಯೊಬ್ಬರು ವೇದಿಕೆಯಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಸಾತನೂರಿನಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನದ ವೇಳೆ ಶಕುನಿ ಪಾತ್ರ ಮಾಡುತ್ತಿದ್ದ ಎನ್. ಮುನಿಕೆಂಪಣ್ಣ ಅವರು ವೇದಿಕೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಎನ್. ಮುನಿಕೆಂಪಣ್ಣ ಅವರು ಖ್ಯಾತ ಕಲಾವಿದರಾಗಿದ್ದು, ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಸಾತನೂರಿನಲ್ಲಿ ನಡೆದ ಕುರುಕ್ಷೇತ್ರ ನಾಟಕದಲ್ಲಿ ಶಕುನಿ ಪಾತ್ರ ಮಾಡುತ್ತಿರುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
