ನಾಡಿನ ಜನತೆಯು ಸರ್ಕಾರದ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮ ಪಕ್ಷದ ಗುರಿ : ಡಿ.ಕೆ ಶಿ – vishwanews24

Featured, ರಾಜ್ಯ ನ್ಯೂಸ್

ಕಾಂಗ್ರೆಸ್‌ನಿಂದ ಹೋದವ್ರನ್ನ ಬಿಜೆಪಿಯವರು ಯೂಸ್ & ಥ್ರೋ ರೀತಿ ಟ್ರೀಟ್ ಮಾಡುತ್ತಿದ್ದಾರೆ : ಡಿ.ಕೆ ಶಿ

ಶಿವಮೊಗ್ಗ: ಕಾಂಗ್ರೆಸ್‌ನಿಂದ ಹೋದವ್ರನ್ನ ಬಿಜೆಪಿಯವರು ಯೂಸ್ & ಥ್ರೋ ರೀತಿ ಟ್ರೀಟ್ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಬೇರೆ ಪಕ್ಷಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮೇಲೆ ಅವಲಂಬಿತವಾಗಿ ಸರ್ಕಾರ ನಡೆಸುತ್ತಿಲ್ಲ. ತಮ್ಮ ಪಕ್ಷದ ಗುರಿ ನಾಡಿನ ಜನತೆಯು ಸರ್ಕಾರದ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದಾಗಿದೆ ಎಂದರು.

ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ಕಾಮರ್ಸ್ ಒಲಿಂಪಿಯಾಡ್ 2025 – ಸ್ಪರ್ಧೆಯಲ್ಲಿ ಉಡುಪಿಯ 9ನೇ ತರಗತಿ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದೇಶಕ್ಕೆ 12ನೇ ರ‍್ಯಾಂಕ್ – vishwanews24

ಬಿಜೆಪಿಯವರಿಗೆ ರಾಜ್ಯದ ಜನ ಅಧಿಕಾರ ನೀಡಿದಾಗ ಅವರಲ್ಲಿ ಸರ್ಕಾರ ನಡೆಸುವ ಅನುಭವ ಇರಲಿಲ್ಲ. ಈಗ ವಿರೋಧ ಪಕ್ಷದಲ್ಲಿ ಕೂತು ಕೆಲಸ ಮಾಡಿ ಎಂದು ಜನ ಹೇಳಿದ್ದಾರೆ. ಬಿಜೆಪಿಯಲ್ಲಿನ ಒಳಜಗಳಗಳು ಯಾವತ್ತೂ ಇದ್ದಿದ್ದೇ. ಅವರ ಪಾರ್ಟಿಯವರು ಏನಾದ್ರೂ ಮಾಡಿಕೊಳ್ಳಲಿ. ನಾವು ಅದಕ್ಕೆ ಮಧ್ಯೆ ಪ್ರವೇಶಿಸಲು ಇಷ್ಟವಿಲ್ಲ. ಅದರಿಂದ ರಾಜಕೀಯ ಲಾಭದ ನಿರೀಕ್ಷೆಯೂ ನಮಗಿಲ್ಲ ಎಂದು ಹೇಳಿದರು.

Leave a Reply