ನಾನು ಎಲ್ಲವನ್ನು ಗೆದ್ದು ಬರುತ್ತೇನೆ, ಎಲ್ಲದಕ್ಕೂ ಉತ್ತರ ಕೊಡುತ್ತೇನೆ : ಡಿ.ಕೆ.ಶಿ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ‘ನಾನು ಎಲ್ಲವನ್ನು ಗೆದ್ದು ಬರುತ್ತೇನೆ, ಬಿಜೆಪಿ ನಾಯಕರ ಬಂಡವಾಳ ಬಿಚ್ಚಿ ಇಡುತ್ತೇನೆ, ನಾನೊಬ್ಬನೇ ತಪ್ಪು ಮಾಡಿದ್ದಾ? ಎಲ್ಲದಕ್ಕೂ ಉತ್ತರ ಕೊಡುತ್ತೇನೆ’ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಎಂದು ಗುಡುಗಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಮಂಗಳವಾರ ವಿಚಾರಣೆ ಮುಗಿದ ಬಳಿಕ ಅವರ ಅಪೇಕ್ಷೆಯಂತೆ ನ್ಯಾಯಾಲಯ ಅವರ ಸಂಬಂಧಿಕರೊಡನೆ 10 ನಿಮಿಷ ಮಾತನಾಡಲು ಅನುಮತಿ ನೀಡಿತ್ತು. ಈ ವೇಳೆ  ಡಿ.ಕೆ.ಶಿವಕುಮಾರ್‌ ಅವರನ್ನು ಅವರ ಸಂಬಂಧಿಗಳು ಮತ್ತು ಅಭಿಮಾನಿಗಳು ಬಂದು ಭೇಟಿಯಾದರು.

ಕ ಮಾಧ್ಯಮದವರೊಂದಿಗೂ ಮಾತನಾಡಿದ ಅವರು, ನಾನು ಎಲ್ಲವನ್ನು ಗೆದ್ದು ಬರುತ್ತೇನೆ, ಎಲ್ಲದಕ್ಕೂ ಉತ್ತರ ಕೊಡುತ್ತೇನೆ  ಬಿಜೆಪಿ ನಾಯಕರ ಬಂಡವಾಳ ಬಿಚ್ಚಿ ಇಡುತ್ತೇನೆ ಎಂದು  ಹೇಳಿದರು.

ಡಿ.ಕೆ.ಶಿವಕುಮಾರ್‌ ಆತ್ಮಸ್ಥೈರ್ಯದಿಂದ ಇದ್ದಾರೆ. ಅವರ ಬೆಂಬಲಿಗರಿಗೆ ಧೈರ್ಯ ತುಂಬಿದ್ದಾರೆ. ಅವರ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಅವರ ಮೇಲಿರುವ ಎಲ್ಲ ಆರೋಪಗಳಿಂದ ಮುಕ್ತಿ ಸಿಗಲಿದೆ. ನ್ಯಾಯಾಲಯದಲ್ಲಿ ಜಯ ಸಿಗಲಿದೆ. ಬಂಡೆ ಜಗ್ಗಲ್ಲ, ಬಗ್ಗಲ್ಲ, ಬಿಸಿಲು ಮಳೆ ಬಂದರೂ ಅಲ್ಲಾಡುವುದಿಲ್ಲ.