ನಾನು ಯಾವುದೇ ಧರ್ಮ ವಿರೋಧಿ ಅಲ್ಲ, ಜನರನ್ನು ಪ್ರೀತಿಸುವ ಮನುಷ್ಯ: ನಟ ಪ್ರಕಾಶ್ ರಾಜ್ – Vishwanews24
ನಾನು ಯಾವುದೇ ಧರ್ಮ ವಿರೋಧಿ ಅಲ್ಲ, ಜನರನ್ನು ಪ್ರೀತಿಸುವ ಮನುಷ್ಯ: ನಟ ಪ್ರಕಾಶ್ ರಾಜ್
ಕಲಬುರಗಿ: ನಾನು ಯಾವುದೇ ಧರ್ಮ ವಿರೋಧಿ ಅಲ್ಲ, ಜನರನ್ನು ಪ್ರೀತಿಸುವ ಮನುಷ್ಯ. ನಾವು ಯಾವುದೇ ಧರ್ಮದ ಬಗ್ಗೆ ಮಾತನಾಡುತ್ತಿಲ್ಲ ಎಂದು ಬಹುಭಾಷಾ ನಟ, ಚಿಂತಕ ಪ್ರಕಾಶ್ ರಾಜ್ ಹೇಳಿದ್ದಾರೆ.
ಕಲಬುರಗಿಯ ರಂಗಮಂದಿರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಕಾಶ್ ರಾಜ್ ಆಗಮಿಸಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಿದ ಕುರಿತು ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್ ರಾಜಕಾರಣಿಗಳು ಏನು ಧರ್ಮವನ್ನು ಗುತ್ತಿಗೆ ಪಡೆದಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ಪ್ರಕಾಶ್ ರಾಜ್ ನಾನು ಯಾವುದೇ ಧರ್ಮ ವಿರೋಧಿ ಅಲ್ಲ. ನಾವು ಯಾವುದೇ ಧರ್ಮದ ಬಗ್ಗ ಮಾತನಾಡುತ್ತಿಲ್ಲ. ನಾನು ಜನರನ್ನು ಪ್ರೀತಿಸುವ ಮನುಷ್ಯ. ರಾಜಕಾರಣಿಗಳು ಏನಾದರೂ ಧರ್ಮವನ್ನು ಗುತ್ತಿಗೆ ಪಡೆದಿದ್ದಾರತಾ, ರೋಗ ಅವರಿಗೆ ಬಂದಿರುವುದು ನನಗಲ್ಲ ಎಂದಿದ್ದಾರೆ.
