ನಾಲ್ಕು ಕಡೆ ವೋಟರ್ ಐಡಿ ಹೊಂದಿದ್ದ ನಟ ಪ್ರಕಾಶ್ ರಾಜ್​ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ನಟ, ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ವೋಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರು ದಾಖಲಾಗಿದೆ.

ದೂರು ನೀಡಿದ ವಕೀಲ ಅರುಣ್, ನಟ ಪ್ರಕಾಶ ರಾಜ್​ ನಾಮಪತ್ರ ರದ್ದುಗೊಳಿಸುವಂತೆ ಬೆಂಗಳೂರು ಕೇಂದ್ರ ಆರ್​ಒ ಅವರಿಗೂ ದೂರು ನೀಡಿದ್ದು, ಅವರು ನಾಲ್ಕು ಕಡೆ ವೋಟರ್ ಐಡಿ ಹೊಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ವೋಟರ್ ಐಡಿ ಹೊಂದುವುದು ಕಾನೂನು ಪ್ರಕಾರ ಅಪರಾಧ. ಕೂಡಲೇ ಅವರ ಉಮೇದುವಾರಿಕೆಯನ್ನು ರದ್ದು ಮಾಡಬೇಕು ಎಂದು ವಕೀಲರಾದ ಜಗನ್ ಕುಮಾರ್ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಬೆಂಗಳೂರನ ಶಾಂತಿನಗರ, ತಮಿಳನಾಡಿನ ವೇಲಚ್ಚೇರಿಯಲ್ಲಿ ಎರಡು ಕಡೆ ಹಾಗೂ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ, ಒಟ್ಟು ನಾಲ್ಕು ಭಾಗದಲ್ಲಿ ವೋಟರ್ ಐಡಿಯನ್ನು ನಟ ಪ್ರಕಾಶ ರೈ ಹೊಂದಿದ್ದಾರೆ. ಎಲ್ಲಾ ಕಡೆಯಲ್ಲೂ ಪ್ರಕಾಶ್ ರಾಜ್ s/o ಮಂಜುನಾಥ್ ರೈ ಅಂತಲೇ ಇದ್ದು, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ವಕೀಲ ಅರಣ್ ದೂರಿನಲ್ಲಿ ಒತ್ತಾಯಿಸಿದ್ದಾರೆ.