ನಾಳೆ ಉಡುಪಿಗೆ ರಾಹುಲ್ ಗಾಂಧಿ  – Vishwanews24

Featured, ಉಡುಪಿ

ನಾಳೆ ಉಡುಪಿಗೆ ರಾಹುಲ್ ಗಾಂಧಿ – ಉಚ್ಚಿಲದಲ್ಲಿ ಮೀನುಗಾರರ ಸಮಾವೇಶದಲ್ಲಿ ಭಾಗಿ..

ಉಡುಪಿ: ಏ. 27ರಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಉಡುಪಿಯ ಉಚ್ಚಿಲಕ್ಕೆ ಬರಲಿದ್ದು ಮೀನುಗಾರರ ಸಮಾವೇಶ ಅವರ ಜೊತೆಗೆ ಸಂವಾದ ಕಾರ್ಯಕ್ರಮ ‌ನಡೆಯಲಿದೆ.

ಸಭೆ ಸಂವಾದ ಕಾರ್ಯಕ್ರಮ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ‌ ಜಿ ಶಂಕರ್ ಸಭಾಂಗಣದಲ್ಲಿ‌‌ ನಡೆಯಲಿದೆ. ಕಾಪು‌ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನೇತ್ರತ್ವದಲ್ಲಿ ಸಭೆ ಸಂವಾದ ನಡೆಯುವ ಸ್ಥಳವನ್ನು ಎಸ್ ಪಿ ಅಕ್ಷಯ್ ಮಚ್ಛಿಂದ್ರ ತಂಡ ಪರಿಶೀಲನೆ ನಡೆಸಿದರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಅಶೋಕ್‌ ಕುಮಾರ್ ಕೊಡವೂರು, ಮಂಜುನಾಥ ಸುಣೇಗಾರ್, ಹರೀಶ್ ಕಿಣಿ, ಜಿತೇಂದ್ರ ಪುಟಾರ್ಡೋ, ಅಖಿಲೇಶ್ ಕೋಟ್ಯಾನ್, ಶರ್ಪುದ್ದೀನ್ ಶೇಖ್, ವಿಶ್ವಾಸ್ ಅಮೀನ್, ಸತೀಶ್ ಅಮೀನ್, ರೋಶನ್, ಸಂತೋಷ್ ಪಡುಬಿದ್ರೆ, ಶೇಖರ ಹೆಜ್ಮಾಡಿ, ದೀಪಕ್ ಎರ್ಮಾಳ್ ಉಪಸ್ಥಿತರಿದ್ದರು.

ಉಡುಪಿ : ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ – ಅಂಗಾಂಗಗಳ ದಾನ ಮೂಲಕ 7 ಜನರಿಗೆ ಹೊಸ ಬದುಕು ನೀಡಿದ ಯುವಕ – Vishwanews24

Leave a Reply