ನಾಳೆ ನಡೆಯಬೇಕಾಗಿದ್ದ BJP ಜನೋತ್ಸವ ಸಮಾವೇಶ ಸೆ.11 ಕ್ಕೆ ಮುಂದೂಡಿಕೆ – Vishwanews24

Featured, ರಾಜ್ಯ ನ್ಯೂಸ್

ನಾಳೆ ನಡೆಯಬೇಕಾಗಿದ್ದ BJP ಜನೋತ್ಸವ ಸಮಾವೇಶ ಸೆ.11 ಕ್ಕೆ ಮುಂದೂಡಿಕೆ

ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ನಾಳೆ ನಡೆಯಬೇಕಾಗಿದ್ದ ಜನೋತ್ಸವ ಸಮಾವೇಶ ಭಾನುವಾರ ಸೆ.11 ಕ್ಕೆ ಮುಂದೂಡಿಕೆ ಮಾಡಲಾಗಿದೆ. ಸಚಿವ ಉಮೇಶ್ ಕತ್ತಿ ಅವರ ನಿಧನದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ‌ ಸರ್ಕಾರದ ಸಾಧನೆಗಳ‌ ಬಗ್ಗೆ ಸಮಾವೇಶದ ಮೂಲಕ ಪ್ರಚಾರ ಪಡಿಸಬೇಕಾದ ಅನಿವಾರ್ಯತೆಯಿತ್ತು. ಹೀಗಾಗಿ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಮುಂಬರುವ 2023ರ ವಿಧಾನಸಭಾ ಚುನಾವಣೆಯ ದಿಕ್ಸೂಚಿಯ ಆರಂಭ ಎಂದೇ ಹೇಳಲಾಗುತ್ತಿತ್ತು. ಆದರೆ ಇದೀಗ ರಾಜ್ಯ ಸರ್ಕಾರದ ಸಾಧನಾ ಸಮಾವೇಶವಾದ ಜನೋತ್ಸವವನ್ನು ಸೆ.11 ಕ್ಕೆ ಮುಂದೂಡಲಾಗಿದೆ.

ಈ ಸಮಾವೇಶವನ್ನು ಈ ಹಿಂದೆ ಜು.28ರಂದು ನಡೆಸಲು ಉದ್ದೇಶಿಸಲಾಗಿತ್ತು. ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಸಮಾವೇಶವನ್ನು ಆ.28ಕ್ಕೆ ಮುಂದೂಡಲಾಗಿತ್ತು. ಬಳಿಕ ಸೆ.8ರಂದು ನಡೆಸಲು ತೀರ್ಮಾನಿಸಲಾಗಿತ್ತು.ಇದೀಗ ಮೂರನೇ ಬಾರಿ ಜನೋತ್ಸವವನ್ನು ಮುಂದೂಡಿದಂತಾಗಿದೆ.

ಪ್ರವೀಣ್‌ ಹತ್ಯೆ ಪ್ರಕರಣವನ್ನು ಭಯೋತ್ಪಾದನಾ ಘಟನೆ ಎಂದು ತಿರುಚಲು ಎನ್‌ಐಎಗೆ ಸೂಚಿಸಲಾಗಿದೆ..

Leave a Reply