ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಬಡವರಿಗಾಗಿ : ಸಚಿವ ಮಂಕಾಳು ವೈದ್ಯ – vishwanews24

Featured, ಉಡುಪಿ

ಯೋಜನೆ ಕೊಡಬೇಕಾದ್ರೆ ನಮಗೆ ಮತ ಹಾಕಿ ಅಂತಾ ಎಲ್ಲಿಯೂ ಹೇಳಿಲ್ಲ..

ಇಷ್ಟು ಸಹಾಯ ಮಾಡಿದ್ರೂ ಜನ ನಮಗೆ ಮತ ಹಾಕದಿರುವುದರ ಬಗ್ಗೆ ನೋವು ಇದೆ..

ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕ್ಲಿ ಎಂಬ ಉದ್ದೇಶಕ್ಕೆ ಯೋಜನೆ ಜಾರಿಗೆ ತಂದಿಲ್ಲ..

ಇನ್ನಷ್ಟು ಕೆಲಸ ಮಾಡಿ ಮತ ಸೆಳೆಯುವ ಕೆಲಸ ಮಾಡುತ್ತೇವೆ

ಕಾರವಾರ: ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಬಡವರಿಗಾಗಿ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕ್ಲಿ ಎಂಬ ಉದ್ದೇಶಕ್ಕೆ ಯೋಜನೆ ಜಾರಿಗೆ ತಂದಿಲ್ಲ ಎಂದು ಸಚಿವ ಮಂಕಾಳು ವೈದ್ಯ ನುಡಿದರು.

ಇಂದು ಕಾರವಾರದಲ್ಲಿ ನಡೆದ ಕೆಡಿಪಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯೋಜನೆ ಕೊಡಬೇಕಾದ್ರೆ ನಮಗೆ ಮತ ಹಾಕಿ ಅಂತಾ ಎಲ್ಲಿಯೂ ಹೇಳಿಲ್ಲ. ನಮ್ಮ ಗ್ಯಾರಂಟಿ ಯೋಜನೆಗೂ, ಚುನಾವಣೆ ಹಿನ್ನೆಡೆಗೂ ಸಂಬಂಧ ಇಲ್ಲ. ನಮ್ಮ ಯೋಜನೆಯಿಂದ ರಾಜ್ಯದ ಕೋಟ್ಯಂತರ ಬಡವರಿಗೆ ಅನುಕೂಲ ಆಗಿರುವ ಬಗ್ಗೆ ಸಂತಸವಿದೆ. ಅದೇ ರೀತಿ ಲೋಕಸಭೆ ಚುನಾವಣೆಯಲ್ಲಿ ಹಿನ್ನೆಡೆ ಆಗಿರುವುದಕ್ಕೆ ಅಸಮಾಧಾನ ಇದೆ. ಇಷ್ಟು ಸಹಾಯ ಮಾಡಿದ್ರೂ ಜನ ನಮಗೆ ಮತ ಹಾಕದಿರುವುದರ ಬಗ್ಗೆ ನೋವು ಇದೆ. ಆದ್ರೆ ಏನ್ ಮಾಡೊಕೆ ಆಗುತ್ತೆ? ಇನ್ನಷ್ಟು ಕೆಲಸ ಮಾಡಿ ಮತ ಸೆಳೆಯುವ ಕೆಲಸ ಮಾಡುತ್ತೇವೆ ಎಂದರು.

ಮೆಕ್ಕಾದಲ್ಲಿ ತಾಪಮಾನ ಏರಿಕೆ : 550ಕ್ಕೂ ಹೆಚ್ಚು ಹಜ್‌ ಯಾತ್ರಿಕರ ಸಾವು ..! vishwanews24

ಉತ್ತರಕನ್ನಡ ಕ್ಷೇತ್ರದಲ್ಲಿ ಕಳೆದ ಆರು ಬಾರಿ ಕಾಂಗ್ರೆಸ್ ಗೆ ಹಿನ್ನಡೆ ಆಗಿದೆ. ಈ ಹಿಂದೆಯೂ ಎರಡು ಲಕ್ಷ, ಮೂರು ಲಕ್ಷ ಅಂತರದಲ್ಲಿ ಕಾಂಗ್ರೆಸ್ ಸೋತಿದೆ. ಈ ಹಿಂದೆ ಇದ್ದ ಯಾವ ಸಚಿವರ ತಲೆದಂಡವೂ ಆಗಿಲ್ಲ. ಹಾಗಾಗಿ ಈ ಬಾರಿ ನನ್ನ ತಲೆ ದಂಡ ಆಗುವ ಪ್ರಶ್ನೆಯೇ ಇಲ್ಲ ಎಂದರು.

ಮೆಕ್ಕಾದಲ್ಲಿ ತಾಪಮಾನ ಏರಿಕೆ : 550ಕ್ಕೂ ಹೆಚ್ಚು ಹಜ್‌ ಯಾತ್ರಿಕರ ಸಾವು ..! vishwanews24

Leave a Reply