ನಿಖಿಲ್ ಗೆಲುವಿಗೆ ಮೇಕೆಗಳನ್ನು ದೇವರಿಗೆ ಬಿಟ್ಟು ಹರಕೆ ಹೊತ್ತುಕೊಳ್ಳುತ್ತಿರುವ ಅಭಿಮಾನಿಗಳು -Vishwanews24
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆದಿದ್ದ ಮಂಡ್ಯ ಕ್ಷೇತ್ರ ಈಗ ಮತ್ತೆ ಎಲ್ಲರೂ ಇತ್ತ ನೋಡುವಂತೆ ಮಾಡುತ್ತಿದೆ. ಮತದಾನೋತ್ತರ ಸಮೀಕ್ಷೆ ಮೈತ್ರಿ ಅಭ್ಯರ್ಥಿ ನಿಖಿಲ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದು, ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಅಭಿಮಾನಿಗಳು ಮೇಕೆ ಬಿಟ್ಟು ಹರಕೆ ಹೊತ್ತುಕೊಳ್ಳುತ್ತಿದ್ದಾರೆ.
ನಿನ್ನೆ ಸುಮಲತಾ ಅಂಬರೀಷ್ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದರು. ಇಂದು ನಿಖಿಲ್ಕುಮಾರಸ್ವಾಮಿ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ದೇವಾಲಯದಲ್ಲಿ ನಿಖಿಲ್ ಗೆಲುವಿಗಾಗಿ ಅಭಿಮಾನಿಗಳಿಂದ ಉರುಳು ಸೇವೆ, ಆರತಿ ಉಕ್ಕಡದ ಅಹಲ್ಯದೇವಿಗೆ ಪೂಜೆ, ಪ್ರಾರ್ಥನೆ ನಡೆಯುತ್ತಿದ್ದು, ಮೇಕೆಗಳನ್ನು ದೇವರಿಗೆ ಬಿಟ್ಟು ಹರಕೆ ಹೊತ್ತುಕೊಳ್ಳುತ್ತಿದ್ದಾರೆ.
ಚುನಾವಣೋತ್ತರ ಸಮೀಕ್ಷೆ ಆಧಾರದಲ್ಲಿ ನಿಖಿಲ್ಕುಮಾರಸ್ವಾಮಿ ಅಭಿಮಾನಿಗಳು ತಮ್ಮದೇ ಗೆಲುವು ಅನ್ನುತ್ತಿದ್ದು, ಇನ್ನೊಂದೆಡೆ ಸುಮಲತಾ ಅಭಿಮಾನಿಗಳು ಗೆಲುವು ತಮ್ಮದೆನ್ನುತ್ತಿದ್ದಾರೆ.
