ನಿವೃತ್ತ ಅಧ್ಯಾಪಕ, ಹಿರಿಯ ರಾಜಕೀಯ ಮುಖಂಡ ಪಟ್ಲ ಅಣ್ಣಯ್ಯ ನಾಯಕ್ ನಿಧನ ಉಡುಪಿ ಜಿಲ್ಲಾ ಬಿಜೆಪಿ ತೀವೃ ಸಂತಾಪ -Vishwanews24
ನಿವೃತ್ತ ಅಧ್ಯಾಪಕ, ಹಿರಿಯ ರಾಜಕೀಯ ಮುಖಂಡ ಪಟ್ಲ ಅಣ್ಣಯ್ಯ ನಾಯಕ್ ನಿಧನ ಉಡುಪಿ ಜಿಲ್ಲಾ ಬಿಜೆಪಿ ತೀವೃ ಸಂತಾಪ -Vishwanews24
ಉಡುಪಿ : ಪಟ್ಲ ಶಾಲೆಯ ನಿವೃತ್ತ ಶಿಕ್ಷಕ, ಗುತ್ತಿಗೆದಾರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷರಾದ ಹಿರಿಯ ರಾಜಕೀಯ ಮುಖಂಡ ಪಟ್ಲ ಅಣ್ಣಯ್ಯ ನಾಯಕ್ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.
ಜನಸಂಘ, ಆರ್.ಎಸ್.ಎಸ್., ಮತ್ತು ಬಿಜೆಪಿ ಸಂಘಟನೆಗಳಲ್ಲಿ ತನ್ನನ್ನು ತಾನು ಸವೆಸಿ ದುಡಿದದ್ದು ಅವರ ರಾಷ್ಟ್ರಭಕ್ತಿಗೆ ಒಂದು ಉತ್ತಮ ಉದಾಹರಣೆ. ದಿ. ಕರಂಬಳ್ಳಿ ಸಂಜೀವ ಶೆಟ್ಟಿಯವರನ್ನು ತನ್ನ ರಾಜಕೀಯ ಗುರುಗಳಾಗಿ ಮತ್ತು ದಿ. ಡಾ. ವಿ. ಎಸ್. ಆಚಾರ್ಯರ ಅತ್ಯಂತ ಆತ್ಮೀಯರಲ್ಲಿ ಒಬ್ಬರಾಗಿದ್ದ ಪಟ್ಲ ಅಣ್ಣಯ್ಯ ನಾಯಕ್ ಅವರು ಆರ್.ಎಸ್.ಬಿ. ಸಂಘದ ಸದಸ್ಯರಾಗಿ, ಅಧ್ಯಕ್ಷರಾಗಿ ಮತ್ತು ಬಂಟಕಲ್ಲು ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿ ಸ್ವಸಮಾಜದ ಸೇವೆ ಸದಾ ಮಾನನೀಯವಾದದ್ದು ಎಂದು ತಿಳಿಸಿರುವ ಕುಯಿಲಾಡಿ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ ಪರ್ಕಳ ಇದರ ಮಾಜಿ ಅಧ್ಯಕ್ಷರಾಗಿ ಹಾಗೂ ಹಲವಾರು ಸಂಘಸಂಸ್ಥೆಗಳಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಪಟ್ಲ, ಇಂದು ಒಬ್ಬ ಸಹಾಯಿ, ಸೇವಕ, ಉದಾರಿ ಮತ್ತು ದೊಡ್ಡ ಕನಸಿನ ಹಿರಿಯರೊಬ್ಬರನ್ನು ಕಳೆದುಕೊಂಡ ಅನಾಥ ಪ್ರಜ್ಞೆ ಪಟ್ಲ ಪರಿಸರಕ್ಕೆ ಬಾಧಿಸಿದೆ. ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ ನೀಡಲಿ ಎಂದು ಕುಯಿಲಾಡಿ ಸುರೇಶ್ ನಾಯಕ್ ರವರು ಸಂತಾಪದಲ್ಲಿ ತಿಳಿಸಿದ್ದಾರೆ.
