ನೂತನ ಸಂಸತ್ ಭವನ ಶಂಕುಸ್ಥಾಪನೆ: ಬಸವಣ್ಣನವರ ಅನುಭವ ಮಂಟಪದ ಕುರಿತು ಕನ್ನಡದಲ್ಲಿ ಮಾತನಾಡಿದ ಪ್ರಧಾನಿ ಮೋದಿ Vishwanews24
ನೂತನ ಸಂಸತ್ ಭವನ ಶಂಕುಸ್ಥಾಪನೆ: ಬಸವಣ್ಣನವರ ಅನುಭವ ಮಂಟಪದ ಕುರಿತು ಕನ್ನಡದಲ್ಲಿ ಮಾತನಾಡಿದ ಪ್ರಧಾನಿ ಮೋದಿ Vishwanews24
PM @narendramodi ji lays the foundation for the new Parliament building & uses this historic occasion to invoke Basavanna. @PMOIndia pays tributes to Anubhava Mantapa as the world's first Parliament while emphasizing India's deep-rooted democratic culture. #NewParliament4NewIndia pic.twitter.com/orStywG5O2
— Vijayendra Yeddyurappa (@BYVijayendra) December 10, 2020
ಬೆಂಗಳೂರು: ನವದೆಹಲಿಯ ಹೊಸ ಸಂಸತ್ತು ಭವನಕ್ಕೆ ಅಡಿಗಲ್ಲು ಹಾಕಿದ ಬಳಿಕ 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಕುರಿತು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಮಾತನಾಡಿದ್ದು ಇದೀಗ ವೈರಲ್ ಆಗಿದೆ.
12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಆಧಾರದ ಮೇಲೆ ಸಂಸತ್ತು ಭವನ ನಿರ್ಮಾಣ ರೂಪುಗೊಂಡಿತು. ಬಸವಣ್ಣನವರು ಹೇಳಿದ್ದರು, ಈ ಅನುಭವ ಮಂಟಪ ನಾಡಿನ, ರಾಜ್ಯ-ರಾಷ್ಟ್ರದ ಜನರ ಉನ್ನತಿಗೆ ಕೆಲಸ ಮಾಡುತ್ತದೆ. ಅನುಭವ ಮಂಟಪ ಲೋಕತಂತ್ರ, ಜನಹಿತದ ಸ್ವರೂಪವಾಗಿತ್ತು ಎಂದು ಹೇಳಿ ಪ್ರಧಾನಿ ಮೋದಿ ಗಮನ ಸೆಳೆದರು.
ಕನ್ನಡದಲ್ಲಿ ಮಾತನಾಡಿದ ಮೋದಿ, “ಅನುಭವ ಮಂಟಪ ನಾಡಿನ ಜನರ ಅಭಿವೃದ್ಧಿಗಾಗಿ ಮತ್ತು ಉನ್ನತಿಗಾಗಿ ಕೆಲಸ ಮಾಡುತ್ತದೆ ಎಂದರು”.
ಅವರು ಮಾತನಾಡಿರುವ ವಿಡಿಯೊ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಹೊಸ ಸಂಸತ್ತು ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಐತಿಹಾಸಿಕ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪ ಎಂದು ಹೇಳಿ ಒತ್ತು ನೀಡುವ ಮೂಲಕ ಭಾರತದ ಪ್ರಜಾಪ್ರಭುತ್ವಕ್ಕೆ ಆಳವಾದ ಸಾಂಸ್ಕೃತಿಕ ಹಿನ್ನೆಲೆಯಿದೆ ಎಂದು ಹೇಳಿದ್ದಾರೆ ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
