ನೂರಕ್ಕೆ ನೂರರಷ್ಟು ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ : ಡಿಸಿಎಂ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಶುಭ ಸೂಚನೆ ಇದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು.

ಕೋಡಿ ಶ್ರೀಗಳ ಹೇಳಿಕೆಗೆ ಡಿಸಿಎಂ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ. “ಕೋಡಿ ಶ್ರೀಗಳದ್ದು ವೈಯಕ್ತಿಕ ಅಭಿಪ್ರಾಯ. ನೂರಕ್ಕೆ ನೂರರಷ್ಟು ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಬಿಜೆಪಿ ಹಿರಿಯ ನಾಯಕ ಅಶ್ವಥ್ ನಾರಾಯಣ್, ಸಿದ್ದರಾಮಯ್ಯ ಬಗ್ಗೆ ಕೋಡಿ ಶ್ರೀಗಳು ನೀಡಿದ ಹೇಳಿಕೆ ವೈಯಕ್ತಿಕ ಅಭಿಪ್ರಾಯ. ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ ಎಂಬ ವಿಶ್ವಾಸವಿದೆ. ಈಗಷ್ಟೇ ಅಲ್ಲ ಮುಂದೆಯೂ ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ನಾವು ಇನ್ನಷ್ಟು ಸಧೃಡವಾಗಲಿದ್ದೇವೆ ಎಂದು ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ಯಾರಿಗೂ ಮಧ್ಯಂತರ ಚುನಾವಣೆ ಬೇಕಿಲ್ಲ. ಸಿದ್ದರಾಮಯ್ಯ ಮತ್ತು ಎಚ್​​.ಡಿ ಕುಮಾರಸ್ವಾಮಿಗೆ ಚುನಾವಣೆ ಕಂಡರೆ ಭಾರೀ ಹೆದರಿಕೆ. ಚುನಾವಣೆಯೆಂದರೆ ಅವರಿಗೆ ನಿದ್ದೆಯೇ ಬರಲ್ಲ. ನಾವು ಎಲ್ಲಾ ಚುನಾವಣೆಗಳು ಸಿದ್ಧರಿದ್ದೇವೆ. ನಾವು ಅಧಿಕಾರಕ್ಕೆ ಬರುವ ಮುನ್ನ ಯಾವುದೇ ಚುನಾವಣೆ ಬರುವುದಿಲ್ಲ ಎಂದರು.