ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಲು ರಾಜ್ಯ ಸರ್ಕಾರದಿಂದ 1 ರಿಂದ 2 ಲಕ್ಷ ರೂ. ಹೆಚ್ಚುವರಿ ಮೊತ್ತ : ಮಾಧುಸ್ವಾಮಿ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು : ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾಗಿದ್ದು, ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗುವಂತೆ ಸ್ವಲ್ಪ ವಿಶಾಲವಾದ ಮನೆಗಳನ್ನು ನಿರ್ಮಿಸಲು 1 ರಿಂದ 2 ಲಕ್ಷ ರೂ. ಹೆಚ್ಚುವರಿ ಮೊತ್ತ ಭರಿಸುವ ಚಿಂತನೆ ಇದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ವೆಚ್ಚ ಮಾಡಲಾಗುವುದು. ಈ ಉದ್ದೇಶಕ್ಕೆ ಕೇಂದ್ರ ಸರ್ಕಾರ ವಸತಿ ಯೋಜನೆಗಳಡಿ ತಲಾ 1.40 ಲಕ್ಷ ರೂ. ಸಬ್ಸಿಡಿ ಸಿಗಲಿದ್ದು, ಉಳಿದ 3.60 ಲಕ್ಷ ರೂ.ಗಳನ್ನು ಸರ್ಕಾರ ಭರಿಸಲಿದೆ ಎಂದರು.

ಇನ್ನು ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗುವಂತೆ ಸ್ವಲ್ಪ ವಿಶಾಲವಾದ ಮನೆಗಳನ್ನು ನಿರ್ಮಿಸಲು 1 ರಿಂದ 2 ಲಕ್ಷ ರೂ. ಹೆಚ್ಚುವರಿ ಮೊತ್ತ ಭರಿಸುವ ಚಿಂತನೆ ಇದೆ. ಈ ಉದ್ದೇಶಕ್ಕಾಗಿ ಸಿಎಸ್ ಆರ್ ದೇಣಿಗೆ ಹಣವನ್ನು ಬಳಕೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.