ನೆಲೆ ಇಲ್ಲದೇ ಕಾಂಗ್ರೆಸ್ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಮಾತನಾಡುತ್ತಿದೆ : ಶೋಭಾ ಕರಂದ್ಲಾಜೆ -Vishwanews24

Featured, ರಾಜ್ಯ ನ್ಯೂಸ್

ನೆಲೆ ಇಲ್ಲದೇ ಕಾಂಗ್ರೆಸ್ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಮಾತನಾಡುತ್ತಿದೆ : ಶೋಭಾ ಕರಂದ್ಲಾಜೆ -Vishwanews24

ಚಿಕ್ಕಮಗಳೂರು: ಎಲುಬಿಲ್ಲದ ನಾಲಿಗೆ ಏನನ್ನ ಬೇಕಾದರೂ ಹೇಳುತ್ತೆ. ನೆಲೆ ಇಲ್ಲದೇ ಕಾಂಗ್ರೆಸ್ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಮಾತನಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ವಿರುದ್ಧ ಕಿರಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್ ಹಾಗೂ ತಾಲಿಬಾನ್ ಎರಡೂ ಒಂದೇ ಎಂದು ಹೇಳಿದ್ದ ಧೃವನಾರಾಯಣ್ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮನಸ್ಥಿತಿ ಭಯೋತ್ಪಾದನೆಯನ್ನ ಪ್ರೋತ್ಸಾಹಿಸುತ್ತೆ. ಅದಕ್ಕೆ ಕಾಂಗ್ರೆಸ್ಸಿಗರು ಕಾಶ್ಮೀರದ ಸಮಸ್ಯೆಯನ್ನ ಜೀವಂತವಾಗಿ ಇಟ್ಟಿದ್ದರು. ಸದ್ಯ ಕಾಶ್ಮೀರದ ಸಮಸ್ಯೆ ಹೋಗಿ ಭಯೋತ್ಪಾದಕರ ಹುಟ್ಟು ಅಡಗಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನೇತೃತ್ವದ ಸರ್ಕಾರ ಆ ಕೆಲಸ ಮಾಡಿದೆ. ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಕಾಂಗ್ರೆಸ್ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಯಾರು ದೇಶದ್ರೋಹಿಗಳು, ಯಾರು ದೇಶಭಕ್ತರು ಅನ್ನೋದು ಜನರಿಗೆ ಗೊತ್ತು. ಅವರೇ ಉತ್ತರಿಸುತ್ತಾರೆ ಎಂದರು.