ನೇಣಿಗೆ ಶರಣಾದ 8 ನೇ ತರಗತಿ ವಿದ್ಯಾರ್ಥಿನಿ – vishwanews24
ನೇಣಿಗೆ ಶರಣಾದ 8 ನೇ ತರಗತಿ ವಿದ್ಯಾರ್ಥಿನಿ
ಭರಮಸಾಗರ: ಬಾಲಕಿಯೊಬ್ಬಳು ಮನೆಯಲ್ಲಿ ಯಾರು ಇಲ್ಲದ ವೇಳೆ ನಿಗೂಢವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸಮೀಪದ ಹಳವುದರ ಲಂಬಾಣಿ ಹಟ್ಟಿ ಗ್ರಾಮದ ಸಂಜನಾ (14) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಗ್ರಾಮದ ಬೇಬಿಬಾಯಿ ಮತ್ತು ಪೊನ್ಯನಾಯ್ಕ್ ಎಂಬುವರ ಮಗಳಾದ ಸಂಜನಾ ಕರಿಯಮ್ಮನಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.
ಮುಂಬೈ : ಹಿಜಾಬ್ ನಂತರ ವಿದ್ಯಾರ್ಥಿಗಳಿಗೆ ಜೀನ್ಸ್, ಟೀಶರ್ಟ್ ನಿಷೇಧಿಸಿದ ಕಾಲೇಜು – vishwanews24
ಮನೆಯಲ್ಲಿ ಯಾರು ಇಲ್ಲದ ವೇಳೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿರಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಬಾಲಕಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
