ನೋಟುಗಳ ನಿಷೇಧ ‘ಕಾನೂನುಬಾಹಿರ’: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿವಿ ನಾಗರತ್ನ – Vishwanews24
ನೋಟುಗಳ ನಿಷೇಧ ‘ಕಾನೂನುಬಾಹಿರ’: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಬಿವಿ ನಾಗರತ್ನ
ಹೊಸದಿಲ್ಲಿ: ನೋಟು ನಿಷೇಧ ಕುರಿತ ಸರಕಾರದ ಅಧಿಸೂಚನೆಯು ಕಾನೂನುಬಾಹಿರವಾಗಿದೆ ಹಾಗೂ ನೋಟು ನಿಷೇಧ ಪ್ರಕ್ರಿಯೆಯನ್ನು ಕೇಂದ್ರವು ಆರಂಭಿಸಬಾರದಿತ್ತು ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ justice BV Nagarathna ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠವು 4:1 ಬಹುಮತದೊಂದಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನೋಟು ನಿಷೇಧ ನಿರ್ಧಾರ ಎತ್ತಿಹಿಡಿದ ಸಂದರ್ಭದಲ್ಲಿ ಜಸ್ಟಿಸ್ ನಾಗರತ್ನ ತಮ್ಮ ತೀವ್ರ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನವೆಂಬರ್ 8, 2016 ರ ಕೇಂದ್ರದ ಅಧಿಸೂಚನೆಯನ್ನು “ಕಾನೂನುಬಾಹಿರ” ಎಂದು ಕರೆದ ಜಸ್ಟಿಸ್ ನಾಗರತ್ನ “ನನ್ನ ಅಭಿಪ್ರಾಯದಲ್ಲಿ, ನವೆಂಬರ್ 8 ರ ಅಧಿಸೂಚನೆಯ ಮೂಲಕ ನೋಟು ಅಮಾನ್ಯೀಕರಣದ ಕ್ರಮವು ಕಾನೂನುಬಾಹಿರವಾಗಿದೆ. ಆದರೆ 2016 ರಲ್ಲಿದ್ದ ಯಥಾಸ್ಥಿತಿಯನ್ನು ಈಗ ಪುನಃಸ್ಥಾಪಿಸಲು ಸಾಧ್ಯವಿಲ್ಲ. ನೋಟು ನಿಷೇಧ ಕಾನೂನು ವಿರುದ್ದವಾಗಿ ಚಲಾಯಿಸಿದ ಅಧಿಕಾರ. ಹೀಗಾಗಿ ಅದು ಕಾನೂನು ಬಾಹಿರ. ಅದನ್ನು ಜಾರಿಗೊಳಿಸಿದ ರೀತಿ ಕಾನೂನಿಗೆ ಅನುಸಾರವಾಗಿಲ್ಲ ಎಂದು ಹೇಳಿದರು.
