ಪಕ್ಕದ ಮನೆಯ ಜಗಳ ಬಿಡಿಸಲು ಹೋದ ಮಹಿಳೆ ಕೊಲೆ -Vishwanews24

Featured, ರಾಜ್ಯ ನ್ಯೂಸ್

 ಪಕ್ಕದ ಮನೆಯ ಜಗಳ ಬಿಡಿಸಲು ಹೋದ ಮಹಿಳೆ ಕೊಲೆ -Vishwanews24

ಹುಬ್ಬಳ್ಳಿ : ಪಕ್ಕದ ಮನೆಯಲ್ಲಿ ಆರಂಭಗೊಂಡ ಜಗಳ ಮಹಿಳೆಯ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಗರದ ಹೊಸೂರು ವೀರ ಮಾರ್ಗದ ಪ್ರದೇಶದಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿಯನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೀತಾ ಕೊಲೆ ಮಾಡಿದ ಆರೋಪಿ, ಮಂಜುಳಾ ಮಣ್ಣವಡ್ಡರ ಕೊಲೆಯಾದ ಮಹಿಳೆ.

ಆರೋಪಿ ಗೀತಾ ತನ್ನ ಮನೆಯಲ್ಲಿ ತಾಯಿ ಹಾಗೂ ನಾದಿನಿಯೊಂದಿಗೆ ಜಗಳವಾಡುತ್ತಿದ್ದ ವೇಳೆ ಮಂಜುಳಾ ಮಣ್ಣವಡ್ಡರ ಬಿಡಿಸಲು ಹೋಗಿದ್ದಳು. ಇದಕ್ಕೆ ಸಿಟ್ಟುಗೊಂಡ ಮಂಜುಳಾ ನೀನೇಕೆ ಇಲ್ಲಿ ಜಗಳ ಬಿಡಿಸಲು ಬಂದಿರುವೆ ಎಂದು ಹಲ್ಲೆ ಮಾಡಿದ್ದಾಳೆ ಎನ್ನಲಾಗ್ತಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಂಜುಳಾ ಕೂಡಲೇ ನೆಲಕ್ಕುರುಳಿ ಮೃತಪಟ್ಟಿದ್ದಾಳೆ.

ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ‌ ‌ಪ್ರಕರಣ ದಾಖಲಾಗಿದ್ದು, ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ.