ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತಿದ್ದೇನೆ : ಕೆ.ಎಸ್.ಈಶ್ವರಪ್ಪ – Vishwanews24
ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತಿದ್ದೇನೆ : ಕೆ.ಎಸ್.ಈಶ್ವರಪ್ಪ
ತಪ್ಪಾಗಿದ್ದರೆ ನನಗೆ ಶಿಕ್ಷೆಯಾಗಲಿ..
ಶಿವಮೊಗ್ಗ: ವ್ಯಕ್ತಿಗಳಿಗೆ ಕೆಲವೊಮ್ಮೆ ಪರೀಕ್ಷೆಗಳು ಎದುರಾಗುತ್ತವೆ. ಷಡ್ಯಂತ್ರ ನಡೆಸಿದವರು ಈಗ ಗೆದ್ದಿದ್ದೇವೆ ಎಂದುಕೊಂಡಿರಬಹುದು. ನಾನು ಆರೋಪದಿಂದ ಮುಕ್ತನಾಗಿ ಬರುತ್ತೇನೆ. ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತಿದ್ದೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಬಿಜೆಪಿ ಕಚೇರಿಗೆ ಆಗಮಿಸಿದ ಕೆ.ಎಸ್.ಈಶ್ವರಪ್ಪ ಅವರು ರಾಜೀನಾಮೆ ನೀಡಬಾರದು ಎಂದು ಮಹಿಳಾ ಕಾರ್ಯಕರ್ತರು ಒತ್ತಾಯ ಮಾಡಿ ಕಣ್ಣೀರು ಹಾಕಿದರು.
ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಈಶ್ವರಪ್ಪ, ಹಿಂದೆ ಪಕ್ಷದ ಮುಖಂಡರು ಪಕ್ಷದ ಅಧ್ಯಕ್ಷನಾಗುವಂತೆ ಹೇಳಿದಾಗ ನಾನು ಸಚಿವ ಸ್ಥಾನ ತ್ಯಜಿಸಿ ಪಕ್ಷದ ಅಧ್ಯಕ್ಷನಾಗಿದ್ದೆ. ಇದೀಗ ನನ್ನ ಮೇಲೆ ಆರೋಪ ಬಂದಿದೆ ಹಾಗಾಗಿ ರಾಜೀನಾಮೆ ನೀಡುತ್ತೇನೆ. ತಪ್ಪಾಗಿದ್ದರೆ ನನಗೆ ಶಿಕ್ಷೆಯಾಗಲಿ. ನನ್ನ ಮನೆದೇವರಾದ ಚೌಡೇಶ್ವರಿ ಹಾಗೂ ಮಲ್ಲೇಶ್ವರನಿಗೆ ನಾನು ನಿಷ್ಟೆಯಿಂದ ಪೂಜೆ ಮಾಡುತ್ತೇನೆ. ನಾನು ಆರೋಪದಿಂದ ಮುಕ್ತನಾಗಿ ಬರುತ್ತೇನೆ. ನೀವು ಅಳುತ್ತಾ ನನ್ನನ್ನು ಕಳುಹಿಸಿ ಕೊಡಬೇಡಿ ಎಂದು ಮನವಿ ಮಾಡಿದರು.
ಎ.16 ರಿಂದ 18 ರವರೆಗೆ ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ನ ಜನತಾ ಜಲಧಾರೆ ರಥಯಾತ್ರೆ – Vishwanews24
