ಪಡುಬಿದ್ರಿ :ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ : ಹೆಜಮಾಡಿ ಯುವಕ ಯಾಸಿನ್‌ ಬಂಧನ – Vishwanews24

Featured, ಉಡುಪಿ

ಪಡುಬಿದ್ರಿ :ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ : ಹೆಜಮಾಡಿ ಯುವಕ ಯಾಸಿನ್‌ ಬಂಧನ

ಪಡುಬಿದ್ರಿ: ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ನೀಡಿದ್ದ ಹೆಜಮಾಡಿ ಯುವಕನೋರ್ವನನ್ನು ಪೋಕ್ಸೊ ಪ್ರಕರಣದಡಿ ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹೆಜಮಾಡಿ ಆಲಡೆ ಬಳಿಯ ನಿವಾಸಿ ಅಬ್ದುಲ್‌ ರೆಹಮಾನ್‌ ಅವರ ಮಗ ಯಾಸಿನ್‌ (19) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗೆ ಸಹಕಾರ ನೀಡಿದ್ದ ಅಪ್ರಾಪ್ತ ವಯಸ್ಕ ಬಾಲಕನನ್ನೂ ವಶಪಡಿಸಿಕೊಂಡಿರುವ ಪೊಲೀಸರು ಆತನನ್ನು ಬಾಲಮಂದಿರಕ್ಕೆ ಸೇರಿಸಿದ್ದಾರೆ.

ಆರೋಪಿ ಯಾಸಿನ್‌, ಎರಡು ಬಾರಿ ಅಪಾರ್ಟ್‌ಮೆಂಟ್‌ಗೆ ಕರೆತಂದು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಬಾಲಕಿಯನ್ನು ಬಸ್‌ನಲ್ಲಿ ಬರಲು ಹೇಳಿದ್ದ ಆರೋಪಿಯು ಬಸ್ಸಿಳಿದು ರಿಕ್ಷಾ ಮೂಲಕ ಹೆಜಮಾಡಿಯ ತಾನು ವಾಸವಿರುವ ಆಪಾರ್ಟ್‌ಮೆಂಟ್‌ಗೆ ಕರೆಸಿದ್ದನು. ಬಾಲಕಿಯನ್ನು ಮೇಲ್ಮಹಡಿಯ ಟೆರೇಸ್‌ನಲ್ಲಿರಿಸಿ ಲೈಂಗಿಕ ಕಿರುಕುಳ ನೀಡಿದ್ದ. ಈ ಕುರಿತಾಗಿ ಸ್ಥಳೀಯರು ಅನುಮಾನ ದಿಂದ ಪಡುಬಿದ್ರಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಪೊಲೀಸರು ಸಕಾಲದಲ್ಲಿ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಬಾಲಕಿಯ ತಂದೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಿಂದುತ್ವಕ್ಕಾಗಿ ಕರಾವಳಿ ಜಿಲ್ಲೆ ಹೊತ್ತಿ ಉರಿದರು ಇನ್ನೂ ರಾಜೀನಾಮೆ ನೀಡುವ ಬಗ್ಗೆ ತಲೆಕೆಡಿಸಿಕೊಳ್ಳದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ: ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ-ಆಕ್ರೋಶ: vishwanews24

Leave a Reply