ಪಡುಬಿದ್ರಿ: ಆಟೋದಲ್ಲಿ ಪರವಾನಗಿ ರಹಿತ ಮಾರಕಾಸ್ತ್ರ ಇಟ್ಟುಕೊಂಡು ಸುಲಿಗೆಗೆ ಸಂಚು : ಮೂವರ ಬಂಧನ – Vishwanews24
ಪಡುಬಿದ್ರಿ: ಆಟೋದಲ್ಲಿ ಪರವಾನಗಿ ರಹಿತ ಮಾರಕಾಸ್ತ್ರ ಇಟ್ಟುಕೊಂಡು ಸುಲಿಗೆಗೆ ಸಂಚು : ಮೂವರ ಬಂಧನ
ಪಡುಬಿದ್ರಿ: ಆಟೋದಲ್ಲಿ ಪರವಾನಿಗಿ ಇಲ್ಲದೇ ಮಾರಕಾಸ್ತ್ರ ಇಟ್ಟುಕೊಂಡು ಸುಲಿಗೆಗೆ ಸಂಚು ರೂಪಿಸಿದ್ದ ಮೂವರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.
ಬಿಜೈ ಕಾಳಾವರ ನಿವಾಸಿ ಮಹಮ್ಮದ್ ಮುನೀರ್ (24), ಮಹಮ್ಮದ್ ಆರೀಫ್ ಮುನ್ನ (37) ಹಾಗೂ ಅಕ್ಟರ್ (36) ಬಂಧಿತರು.
ನಂದಿಕೂರು-ಮುದರಂಗಡಿ, ಕ್ರಾಸ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಾರ್ಕಳದಿಂದ ಬಂದ ಆಟೋವನ್ನು ನಿಲ್ಲಿಸುವಂತೆ ಸೂಚಿಸಿದರೂ, ಚಾಲಕ ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿದ್ದಾನೆ. ಬೆನ್ನಟ್ಟಿದ ಪೊಲೀಸರು ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನ ದ್ವಾರದ ಬಳಿ ತಡೆದು ನಿಲ್ಲಿಸಿದಾಗ, ಚಾಲಕ ಮತ್ತು ಇಬ್ಬರು ಜಿಗಿದು ಓಡಿ ಹೋಗಲು ಯತ್ನಿಸಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುರತ್ಕಲ್: ರೈಲ್ವೇ ನಿಲ್ದಾಣದಲ್ಲಿ ಪ್ಯಾಸೆಂಜರ್ಸ್ ರಿಸರ್ವೇಷನ್ ಸೆಂಟರ್ ಶುಭಾರಂಭ – Vishwanews24
