ಪಡುಬಿದ್ರಿ :ಇತಿಹಾಸ ಪ್ರಸಿದ್ಧ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನ ಸನ್ನಿಧಿಯಲ್ಲಿ ಜ.18ರಿಂದ ಢಕ್ಕೆಬಲಿ ಸೇವೆ – Vishwanews24

Featured, ಉಡುಪಿ

ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ನಡೆಯುವ ದ್ವೈವಾರ್ಷಿಕ ನಡಾವಳಿ ಢಕ್ಕೆಬಲಿ ಸೇವೆಯು ಈ ಬಾರಿ ಜ.18ರಂದು ಮಂಡಲ ಹಾಕುವ ಢಕ್ಕೆಬಲಿ ಸೇವೆಯೊಂದಿಗೆ ಆರಂಭಗೊಳ್ಳಲಿದೆ.

ಒಂದು ನಾಗಮಂಡಲ ಸೇವೆಯೂ ಸೇರಿದಂತೆ ಒಟ್ಟು 35 ಢಕ್ಕೆಬಲಿ ಸೇವೆಗಳು ಈ ಬಾರಿ ನಡೆಯಲಿದ್ದು, ಈ ಪೈಕಿ ಹೆಜಮಾಡಿ ಬ್ರಹ್ಮಸ್ಥಾನ ಮತ್ತು ಮುರುಡಿ ಬ್ರಹ್ಮಸ್ಥಾನಗಳಲ್ಲಿ ತಲಾ ಒಂದು ಢಕ್ಕೆ ಬಲಿ ನಡೆಯಲಿದೆ.


ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಮಾ. 12ರಂದು ನಡೆಯುವ ಮಂಡಲ ವಿಸರ್ಜನೆಯ ಸೇವೆಗಳೊಂದಿಗೆ ಇದು ಸಮಾಪನಗೊಳ್ಳಲಿರುವುದಾಗಿ ಶ್ರೀ ಖಡ್ಗೇಶ್ವರೀ ವನದುರ್ಗಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ವೈ.ಎನ್‌.ರಾಮಚಂದ್ರ ರಾವ್‌  ತಿಳಿಸಿದ್ದಾರೆ.