ಪಡುಬಿದ್ರಿ : ಕ್ಷುಲ್ಲಕ ಕಾರಣಕ್ಕೆ ಸಂಬಂಧಿಕರ ಮೇಲೆ ಹಲ್ಲೆ ನಡೆಸಿ ಬೆದರಿಕೆ – ದೂರು ದಾಖಲು – Vishwanews24

Featured, ಉಡುಪಿ

ಪಡುಬಿದ್ರಿ : ಕ್ಷುಲ್ಲಕ ಕಾರಣಕ್ಕೆ ಸಂಬಂಧಿಕರ ಮೇಲೆ ಹಲ್ಲೆ ನಡೆಸಿ ಬೆದರಿಕೆ – ದೂರು ದಾಖಲು

ಪಡುಬಿದ್ರಿ: ಕ್ಷುಲ್ಲಕ ಕಾರಣಕ್ಕೆ ಸಂಬಂಧಿಕರಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಕಾಪುವಿನ ಹೆಜಮಾಡಿ ಗ್ರಾಮದ ಅಮೀರ್ ಸುಹೈಲ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ನಿನ್ನೆ ಇವರ ದೂರದ ಸಂಬಂಧಿ ಹೆಜಮಾಡಿ ಗ್ರಾಮದ ಎನ್.ಎಸ್. ರಸ್ತೆಯ ನಿವಾಸಿ ಇಕ್ಬಾಲ್ ಎಂಬಾತನು ಕಬ್ಬಿಣದ ರಾಡ್, ಸ್ಕ್ರೂ ಡ್ರೈವರ್, ಮರದ ರೀಪ್‍ನ್ನು ಹಿಡಿದುಕೊಂಡು ಬಂದು ಏಕಾಏಕಿಯಾಗಿ ಪಿರ್ಯಾದಿದಾರರ ಮನೆಯ ಒಳಗೆ ಅಕ್ರಮವಾಗಿ ಬಂದು, ಅವಾಚ್ಯ ಶಬ್ಧಗಳಿಂದ ಬೈದು, ಆತನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಹೊಡೆಯಲು ಮುಂದಾಗಿದ್ದು, ಈ ವೇಳೆ ಅವರು ತಪ್ಪಿಸುವಾಗ ರಾಡ್ ತಲೆಗೆ ಕೈಗೆ ತಾಗಿದೆ. ಬಳಿಕ ಇಕ್ಬಾಲ್‍ನು ಅಮೀರ್ ಸುಹೈಲ್ ಅವರ ಅಣ್ಣ ಇಮ್ರಾನ್‍ನಿಗೆ ರೀಪಿನಿಂದ ಹೊಡೆದಿದ್ದು, ಈ ವೇಳೆಗೆ ಅಮೀರ್ ಅವರ ಅಣ್ಣ ರಮೀಝ್ ಬಂದಾಗ ಆರೋಪಿಯು ಅಲ್ಲಿಂದ ಓಡಿ ಹೋಗಿದ್ದನು. ಆದರೆ ಬಳಿಕ ಆತನ ತಮ್ಮ ನೌಫಲ್, ಅಜರ್, ಅಣ್ಣ ಇಬ್ರಾಹಿಂ, ಮನ್ಸೂರ್, ಮತ್ತಿತರರೊಂದಿಗೆ ಕೈಯಲ್ಲಿ ಬ್ಯಾಟ್ ಹಿಡಿದುಕೊಂಡು ಮನೆಯ ಬಳಿ ಬಂದು ಬೆದರಿಕೆ ಹಾಕಿ, ಕಲ್ಲು ಬಿಸಾಡಿ ಹೋಗಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ : ಕೃಷಿ ತೋಟಕ್ಕೆ ಆಕಸ್ಮಿಕ ಬೆಂಕಿ : ನಮ್ಮಲ್ಲಿ ಗಾಡಿ ಇಲ್ಲ ಎಂದು ಅಗ್ನಿಶಾಮಕ ದಳದಿಂದ ನಿರ್ಲಕ್ಷ್ಯ – Vishwanews24

Leave a Reply