ಪಡುಬಿದ್ರಿ: ದ್ವಿಚಕ್ರವಾಹನಕ್ಕೆ ಬಸ್ ಢಿಕ್ಕಿ; ಯುವಕ ಸಾವು – vishwanews24

Featured, ಉಡುಪಿ

ಪಡುಬಿದ್ರಿ: ದ್ವಿಚಕ್ರವಾಹನಕ್ಕೆ ಬಸ್ ಢಿಕ್ಕಿ; ಯುವಕ ಸಾವು

ಪಡುಬಿದ್ರಿ : ದ್ವಿಚಕ್ರವಾಹನಕ್ಕೆ ಬಸ್ಸೊಂದು ಢಿಕ್ಕಿಯಾದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ಪಲಿಮಾರು ಬಳಿ ಭಾನುವಾರ ರಾತ್ರಿ ನಡೆದಿದೆ.

ಪಲಿಮಾರಿನಿಂದ ಸ್ಕೂಟಿಯಲ್ಲಿ ಎರ್ಮಾಳಿನ ಪೂಂದಾಡು ಎಂಬಲ್ಲಿಗೆ ರವಿವಾರ ರಾತ್ರಿ ನಾಟಕ ನೋಡಲು ತೆರಳುತ್ತಿದ್ದಾಗ ಹೆದ್ದಾರಿಯಲ್ಲಿ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸೊಂದು ಢಿಕ್ಕಿಯಾಗಿ ಪಲಿಮಾರು ದರ್ಕಾಸ್ ನಿವಾಸಿ ಧನ್ ರಾಜ್ ಪಲಿಮಾರು (17) ಮುಕ್ಕದ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ತುಷಾರ್ ಪಲಿಮಾರು ಹಾಗೂ ಕೌಶಿಕ್ ಎರ್ಮಾಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರ್ಕಳ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುವ ಸಂದರ್ಭದಲ್ಲಿ ಈ ಅಪಘಾತವು ಸಂಭವಿಸಿದೆ. ಅಪಘಾತದಲ್ಲಿ ಸ್ಕೂಟಿಯು ಹಾನಿಗೊಳಗಾಗಿದೆ.

ನಟ ಯಶ್ ಹುಟ್ಟು ಹಬ್ಬದ ಕಟೌಟ್ ಆಳವಡಿಸುವಾಗ ಕರೆಂಟ್ ಶಾಕ್ – ಮೂವರು ಯುವಕರ ಮೃತ್ಯು – vishwanews24

Leave a Reply