ಪಡುಬಿದ್ರಿ : ವ್ಯಕ್ತಿ ನಾಪತ್ತೆ ; ಪತ್ತೆಗೆ ಮನವಿ -vishwanews24
ಪಡುಬಿದ್ರಿ : ವ್ಯಕ್ತಿ ನಾಪತ್ತೆ ; ಪತ್ತೆಗೆ ಮನವಿ
ಪಡುಬಿದ್ರಿ : ಕಂಚಿನಡ್ಕದ ನಿವಾಸಿ ರವೀಂದ್ರ (35) ಪಡುಬಿದ್ರಿ ಪೇಟೆಗೆ ಹೋಗಿ ಬರುವುದಾಗಿ ಮನೆಯಲ್ಲಿ ತಾಯಿಗೆ ತಿಳಿಸಿ ಹೋದವರು ಮರಳಿ ಮನೆಗೆ ಬಾರದೇ ನಾಪತ್ತೆಯಾಗಿರುತ್ತಾರೆ.
ಗಾರೆಕೆಲಸವನ್ನು ಮಾಡಿಕೊಂಡಿದ್ದ ಇವರು ಹಾಸನ ಜಿಲ್ಲೆ ಅರೆಹಳ್ಳಿಗೂ ಹೋಗಿದ್ದವರು ಮೂರು ತಿಂಗಳ ಬಳಿಕ ಜು. 14ರಂದು ಹಿಂತಿರುಗಿದ್ದರು.
ಇದೀಗ ಮತ್ತೆ ನಾಪತ್ತೆಯಾಗಿರುವುದಾಗಿ ತಾಯಿ ನೀಡಿದ ದೂರಿನ ಪ್ರಕಾರ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಸಂಪರ್ಕಿಸಿ : 9481580974
