ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭೇಟಿ – vishwanews24
ಕುಟುಂಬದವರೊಂದಿಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನಕ್ಕೆ ಭೇಟಿ
ಪಡುಬಿದ್ರಿ: ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನಕ್ಕೆ ಫೆ. 28ರ ಶುಕ್ರವಾರ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಭೇಟಿ ನೀಡಿದ್ದಾರೆ.
ಇಂದು (ಫೆ. 28ರ ಶುಕ್ರವಾರ) ಪಡುಬುದ್ರಿಯ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ನಡೆಯಲಿರುವ ತಮ್ಮ ಢಕ್ಕೆ ಬಲಿ ಸೇವೆಯ ಪೂರ್ವಭಾವಿಯಾಗಿ ಬೆಳಿಗ್ಗೆ ಪಂಚಾಮೃತ ಅಭಿಷೇಕಕ್ಕಾಗಿ ತನ್ನವರೊಂದಿಗೆ ನಟಿ ಆಗಮಿಸಿದರು.
ಫೆ. 27ರ ಗುರುವಾರ ಬಾಲಿವುಡ್ ನಟಿ ಶಿಲ್ಪಾ ಕುಟುಂಬ ಸಮೇತರಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
