ಪತ್ನಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಗಂಡ ನೇಣಿಗೆ ಶರಣು – vishwanews24
ಪತ್ನಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಗಂಡ ನೇಣಿಗೆ ಶರಣು
ಕಾರವಾರ: ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕಿಯನ್ನು ರಾಘವೇಂದ್ರ ವಾಡಕರ್ ಎಂದು ಗುರುತಿಸಲಾಗಿದೆ. ಸಾವಿಗೂ ಮುನ್ನ ಆತ ಡೆತ್ ನೋಟ್ ಬರೆದಿಟ್ಟಿದಿಟ್ಟಿದ್ದಾನೆ. ಅದರಲ್ಲಿ ಸಾವಿಗೆ ಪತ್ನಿಯ ಕಿರುಕುಳ ಕಾರಣ ಎಂದು ಉಲ್ಲೇಖಿಸಿದ್ದಾನೆ.
ಕಳೆದ ಮೂರು ವರ್ಷಗಳಿಂದ ಮಲೇಷಿಯಾದಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಒಂದು ವಾರದ ಹಿಂದೆ ದಾಂಡೇಲಿಗೆ ಮರಳಿದ್ದ. ಈತ ದಾಂಡೆಲಿಗೆ ಬರುತ್ತಿದ್ದಂತೆ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದ ಪತ್ನಿ, ನಿನ್ನಜೊತೆ ಸಂಸಾರ ಮಾಡೋಕೆ ಆಗಲ್ಲ ಎಂದು ತಕರಾರು ತೆಗೆದಿದ್ದಳು. ಮಕ್ಕಳಿಗಾಗಿ ಒಟ್ಟಿಗೆ ಸಂಸಾರ ಮಾಡೋಣ ಬಾ ಎಂದು ಕರೆದ್ರೂ ಪತ್ನಿ ಒಪ್ಪಿರಲಿಲ್ಲ.
ಇದನ್ನೂ ಓದಿ:
ಕೌಟುಂಬಿಕ ಕಲಹ : ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ – vishwanews24
ಬದಲಿಗೆ ಪತಿಗೆ ಬೇರೆ ಯುವಕರ ಜೊತೆ ಇರುವ ಫೋಟೋಗಳನ್ನ ಕಳಿಸುವುದು, ಮೊಬೈಲ್ ವಾಟ್ಸಾಪ್ನಲ್ಲಿ ಸ್ಟೇಟಸ್ ಹಾಕಿ ಮಾನಸಿಕ ಕಿರುಕುಳ ನೀಡುವುದು ಮಾಡುತ್ತಿದ್ದಳು. ಅಲ್ಲದೇ ನಿನ್ನ ಜೊತೆ ಸಂಸಾರ ಮಾಡಲು ಇಷ್ಟ ಇಲ್ಲ, ಸತ್ತ ಹೋಗು ಎಂದು ಹೇಳಿದ್ದಳು. ಅನೈತಿಕ ಸಂಬಂಧದ ಬಗ್ಗೆಯೂ ಗಂಡನ ಬಳಿ ಓಪನ್ ಆಗಿ ಹೇಳಿಕೊಳ್ಳುತಿದ್ದಳು.
ಅನೈತಿಕ ಸಂಬಂಧ ಬಿಡುವಂತೆ ಪತ್ನಿಗೆ ಬುದ್ದಿವಾದ ಹೇಳಿದ್ದ ರಾಘವೇಂದ್ರ, ಕೈ ಕೊಯ್ದುಕೊಂಡು ಪತ್ನಿಗೆ ವಾಟ್ಸ್ ಅಪ್ ಮಾಡಿದ್ದ. ನೀನು ಸಾಯೋದಾದ್ರೆ ಸಾಯಿ ನನಗೇನೂ ತೊಂದರೆ ಇಲ್ಲ ಎಂದು ಈ ವೇಳೆ ಪತ್ನಿ ಹೇಳಿದ್ದಳಂತೆ. ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:
ಪಿಕಲ್ಬಾಲ್ ಆಟಗಾರರು ಪ್ರಯಾಣಿಸುತ್ತಿದ್ದ ವಿಮಾನ ಟೆಕ್ಸಾಸ್ನಲ್ಲಿ ಪತನ : ಐವರು ಮೃತ್ಯು – vishwanews24
