‘ಪರಪ್ಪನ ಅಗ್ರಹಾರಕ್ಕೆ ಬೇಕಿದ್ರೆ ಹಾಕಲಿ, ನಾವು ಪ್ರೀತಿಗಷ್ಟೇ ಬಗ್ಗೋದು, ಬೆದರಿಕೆಗಲ್ಲ’: ಡಿಕೆ ಬ್ರದರ್ಸ್ ವಾಗ್ದಾಳಿ

Featured, ರಾಜ್ಯ ನ್ಯೂಸ್

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಂಗಮ ರಸ್ತೆ ತೋಟದಲ್ಲಿ ನಡೆದ ಕಾರ್ಯಕರ್ತರ ಅಭಿನಂದನಾ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ, ಬೇಕಾದರೆ ನಮ್ಮನ್ನ ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗಲಿ, ಇದಕ್ಕೆಲ್ಲ ಜಗ್ಗಲ್ಲ, ಪ್ರೀತಿ ವಿಶ್ವಾಸಕ್ಕೆ ಬಗ್ಗುತ್ತೇವೆ, ನನ್ನನ್ನ ನನ್ನ ಕುಟುಂಬವನ್ನ ಬೆದರಿಕೆ ಹಾಕಿ ಎದುರಿಸಿ ಗೆಲ್ಲೋಕಾಗಲ್ಲ, ಅದು ನಮ್ಮ ರಕ್ತದಲ್ಲೇ ಇಲ್ಲ ಎಂದಿದ್ದಾರೆ.

ಇದೇವೇಳೆ, ಸಿಎಂ ಕುಮಾರಸ್ವಾಮಿಯವರು ಸಾಲಮನ್ನಾಕ್ಕಾಗಿ ಈಗಾಗಲೇ ಬ್ಯಾಂಕ್ ಮ್ಯಾನೇಜರ್​ಗಳ ಜೊತೆ ಚರ್ಚೆ ನಡೆಸಿದ್ದಾರೆ. ಸೂಕ್ತಕಾಲದಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ. ಬಜೆಟ್ ಮುಗಿದ ಬಳಿಕ ಚನ್ನಪಟ್ಟಣದಲ್ಲಿ ಸಭೆ ನಡೆಸುತ್ತೇವೆ, ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳನ್ನ ಬಿಡುವ ಪ್ರಶ್ನೆಯೇ ಇಲ್ಲ ಅಂದ್ರು.

ಇದೇ ಸಮಾವೇಶದಲ್ಲಿ ಮಾತನಾಡಿದ ಸಂಸದ ಡಿ.ಕೆ ಸುರೇಶ್, ನಿಮಗೆ ಅವಮಾನವಾಗುವಂಥಾ ಕೆಲಸ ನಾವು ಮಾಡಿಲ್ಲ, ಕೇಂದ್ರ ಸರ್ಕಾರದಿಂದ ನನ್ನ ಮೇಲೆ, ಶಿವಕುಮಾರ್ ಮೇಲೆ ಅನೇಕ ರಾಜಕೀಯ ಷಡ್ಯಂತ್ರಗಳು ನಡೆಯುತ್ತೇವೆ ಎಂದಿದ್ದಾರೆ.

ಒಟ್ಟಾರೆ, ಕಾರ್ಯಕರ್ತರ ಅಭಿನಂದನಾ ಸಮಾವೇಶದಲ್ಲಿ ಡಿಕೆ ಸಹೋದರರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಜೊತೆಗೆ ಸವಾಲ್ ಕೂಡ ಹಾಕಿದ್ದಾರೆ.