ಪಶ್ಚಿಮ ಬಂಗಾಳದ ವೈದ್ಯರ ಬೇಡಿಕೆಗಳನ್ನು 48 ಗಂಟೆಗಳಲ್ಲಿ ಈಡೇರಿಸಬೇಕು : ಮಮತಾಗೆ ಏಮ್ಸ್‌ ವೈದ್ಯರಿಂದ ಎಚ್ಚರಿಕೆ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ : ಪಶ್ಚಿಮ ಬಂಗಾಳದ ವೈದ್ಯರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ತೊಡಗಿದ್ದ ದೆಹಲಿ ಏಮ್ಸ್ ಆಸ್ಪತ್ರೆಯ ವೈದ್ಯರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದು ಸಿಎಂ ಮಮತಾ ಬ್ಯಾನರ್ಜಿಗೆ 48 ಗಂಟೆ ಕಾಲಾವಕಾಶ ನೀಡಿ ಬೇಡಿಕೆ ಪೂರೈಸಲು ನಿರ್ಧರಿಸಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ವೈದ್ಯರ ಬೇಡಿಕೆಗಳನ್ನು ಇನ್ನು 48 ಗಂಟೆಗಳಲ್ಲಿ ಈಡೇರಿಸಬೇಕು. ಇಲ್ಲದಿದ್ದರೆ ದೆಹಲಿ ಆಸ್ಪತ್ರೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ಏಮ್ಸ್ ನ ರೆಸಿಡೆಂಟ್ ವೈದ್ಯರ ಸಂಘ ಮಮತಾ ಬ್ಯಾನರ್ಜಿಗೆ ಎಚ್ಚರಿಕೆ ನೀಡಿದೆ.

ಆದರೆ ಮಮತಾ ಅವರ ಈ ಹೇಳಿಕೆಯ ಹೊರತಾಗಿಯೂ ಏಮ್ಸ್‌ನ ನಿವಾಸಿ ವೈದ್ಯರು “ಎಲ್ಲಕ್ಕಿಂತ ಮೊದಲು ಜೂನಿಯರ್‌ ವೈದ್ಯರ ಬೇಡಿಕೆಗಳನ್ನು ಪೂರೈಸಿ; ವೈದ್ಯ ಸಮುದಾಯದಲ್ಲಿ ಬೇಷರತ್‌ ಕ್ಷಮೆಯನ್ನು ಕೇಳಿ’ ಎಂದು ಪಟ್ಟು ಹಿಡಿದಿದ್ದಾರೆ.

ಮಮತಾ ಅವರನ್ನು ಭೇಟಿಯಾಗುವುದಕ್ಕೆ ಮುಷ್ಕರ ನಿರತ ವೈದ್ಯರು ನಿನ್ನೆ ಶುಕ್ರವಾರವೇ ನಿರಾಕರಿಸಿದ್ದರಲ್ಲದೆ “ಮಮತಾ ಬೇಷರತ್‌ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದರು.

ದೇಶಾದ್ಯಂತದ ವೈದ್ಯ ಸಮುದಾಯದ ಬೆಂಬಲದೊಂದಿಗೆ ವ್ಯಾಪಕವಾಗಿ ನಡೆಯುತ್ತಿರುವ ಮುಷ್ಕರವನ್ನು ಹಿಂಪಡೆಯಲು ಜೂನಿಯರ್‌ ವೈದ್ಯರು ಆರು ಶರತ್ತುಗಳನ್ನು ಪಶ್ಚಿಮ ಬಂಗಾಲ ಸರಕಾರಕ್ಕೆ ವಿಧಿಸಿದ್ದಾರೆ.