ಪಾಕಿಸ್ಥಾನದ ಮೊತ್ತ ಮೊದಲ ಹಿಂದೂ ನ್ಯಾಯಾಧೀಶೆ ಸುಮನ್ ಕುಮಾರಿ ಬೊದಾನಿ – Vishwanews24
ಇಸ್ಲಾಮಾಬಾದ್ : ಸುಮನ್ ಕುಮಾರಿ ಬೊದಾನಿ ಅವರು ಪಾಕಿಸ್ಥಾನದ ಮೊತ್ತ ಮೊದಲ ಹಿಂದು ನ್ಯಾಯಾಧೀಶೆಯಾಗಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ಥಾನದ ಕಂಬರ್ – ಶಹದಾಕೋಟ್ನ ನಿವಾಸಿಯಾಗಿರುವ ಸುಮನ್ ಅವರು ತಮ್ಮ ಹುಟ್ಟೂರ ಜಿಲ್ಲೆಯಲ್ಲಿ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಲಿದ್ದಾರೆ.
ಪಾಕಿಸ್ಥಾನದ ಕಂಬರ್ – ಶಶಹದಾದ್ಕೋಟ್ ಜಿಲ್ಲೆಯ ಮೂಲದವರಾದ ಸುಮನ್ ಅವರು ಅದೇ ಜಿಲ್ಲೆಯಲ್ಲಿ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಲಿದ್ದಾರೆ. ಹೈದರಾಬಾದ್ ನಲ್ಲಿ ಎಲ್ಎಲ್ ಬಿ ಪೂರ್ಣಗೊಳಿಸಿರುವ ಸುಮನ್ ಕುಮಾರಿ, ಕರಾಚಿಯ ಸ್ಜಬಿಸ್ಟ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಗಳಿಸಿದ್ದಾರೆ.
ತಂದೆ ಪವನ್ ಕುಮಾರ್ ಬೊದಾನಿ ಹೇಳುವ ಪ್ರಕಾರ “ಸುಮನ್ ಗೆ ಹುಟ್ಟೂರ ಜಿಲ್ಲೆಯಲ್ಲಿನ ಬಡವರಿಗೆ ಉಚಿತ ಕಾನೂನು ನೆರವು ನೀಡುವಾಸೆ ಇದೆ. ಆಕೆ ತುಂಬಾ ಸವಾಲಿನ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಹಾಗಿದ್ದರೂ ತನ್ನ ಕಠಿನ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಆಕೆ ತನ್ನ ಸೇವಾ ಕ್ಷೇತ್ರದಲ್ಲಿ ಹೊಸ ಹೊಸ ಎತ್ತರಗಳನ್ನು ಕಾಣುವ ವಿಶ್ವಾಸವಿದೆ’.
ಪಾಕಿಸ್ಥಾನದ ಹಿಂದು ಸಮುದಾಯದ ಮೊತ್ತ ಮೊದಲ ನ್ಯಾಯಾಧೀಶರಾಗಿರುವ ರಾಣಾ ಭಗವಾನ್ದಾಸ್ ಅವರು 2005ರಿಂದ 2007ರ ವರೆಗಿನ ಅವಧಿಯಲ್ಲಿ ಪಾಕಿಸ್ಥಾನದ ಚೀಫ್ ಜಸ್ಟಿಸ್ ಆಗಿ ಸೇವೆ ಸಲ್ಲಿಸಿದ್ದಾರೆ.
ಪಾಕಿಸ್ಥಾನದ ಒಟ್ಟು ಜನಸಂಖ್ಯೆಯಲ್ಲಿ ಹಿಂದುಗಳು ಕೇವಲ ಶೇ.2ರಷ್ಟು ಇದ್ದಾರೆ. ಅಂತೆಯೇ ಪಾಕಿಸ್ಥಾನದಲ್ಲಿ ಇಸ್ಲಾಂ ಬಳಿಕದ ಅತೀ ದೊಡ್ಡ ಧರ್ಮವೇ ಹಿಂದು ಧರ್ಮವಾಗಿದೆ.

