ಪಾಕ್ ಆಕ್ರಮಿತ ಕಾಶ್ಮೀರದ ಸಮಸ್ಯೆಗಳನ್ನ ಕೂಡ ನಾವೇ ಶೀಘ್ರವಾಗಿ ಪರಿಹಾರ ಮಾಡುತ್ತೇವೆ : ಶಾಹಿದ್ ಅಫ್ರಿದಿಗೆ ಗಂಭೀರ್ ತಿರುಗೇಟು -Vishwanews24
ನವದೆಹಲಿ:ಜಮ್ಮುಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಘೋಷಣೆ ಮಾಡಿದ ಬೆನ್ನಲ್ಲೇ ಶಾಹಿದ್ ಅಫ್ರಿದಿ ಇದನ್ನು ವಿರೋಧಿಸಿದ್ದರು.
ಜಮ್ಮುಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಘೋಷಣೆ ಮಾಡಿದ ಬೆನ್ನಲ್ಲೇ ಶಾಹಿದ್ ಆಫ್ರಿದಿ ಇದನ್ನು ವಿರೋಧಿಸಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್, ಶಾಹಿದ್ ಅಫ್ರಿದಿ ಸರಿಯಾಗಿಯೇ ಹೇಳಿದ್ದಾರೆ. ಅಲ್ಲಿ ಅಪ್ರಚೋದಿತ ಆಕ್ರಮಣ ನಡೆಯುತ್ತದೆ, ಮನುಷ್ಯತ್ವಕ್ಕೆ ವಿರುದ್ಧವಾದ ಹಲವು ಅಪರಾಧಗಳು ಇವೆ. ಅದನ್ನೆಲ್ಲ ಬೆಳಕಿಗೆ ತಂದಿದ್ದಕ್ಕೆ ಅಫ್ರಿದಿಯವರನ್ನು ಶ್ಲಾಘಿಸಬೇಕು. ಆದರೆ, ಅಫ್ರಿದಿ ಹೇಳಿದ ಎಲ್ಲ ಅಂಶಗಳೂ ಅಸ್ತಿತ್ವದಲ್ಲಿ ಇರುವುದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು. ಯೋಚಿಸಬೇಡಿ, ಅದನ್ನೂ ಕೂಡ ನಾವೇ ಶೀಘ್ರವಾಗಿ ಪರಿಹಾರ ಮಾಡುತ್ತೇವೆ ಎಂದು ಗಂಭೀರ್ ತಿರುಗೇಟು ನೀಡಿದ್ದಾರೆ.

