ಪಿಯುಸಿ ವಿದ್ಯಾರ್ಥಿನಿ ಬದಲಿಗೆ ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ ಬಂಧನ – vishwanews24

Featured, ರಾಜ್ಯ ನ್ಯೂಸ್

ಪಿಯು ವಿದ್ಯಾರ್ಥಿನಿ ಬದಲು ರಾಜ್ಯಶಾಸ್ತ್ರ ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ ಬಂಧನ

ಕಲಬುರಗಿ: ಜಿಲ್ಲೆಯ ಮಿಲಿಂದ್ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿನಿ ಬದಲಿಗೆ ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ ಬಂಧನಕ್ಕೆ ಒಳಗಾಗಿರುವ ಘಟನೆ ನಡೆದಿದೆ.

ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿದ್ದು, ಮಾ.5ರಂದು ರಾಜ್ಯಶಾಸ್ತ್ರ ಪರೀಕ್ಷೆ ನಡೆದಿತ್ತು. ಈ ವೇಳೆ ಕಲಬುರಗಿ ನಗರದ ಖರ್ಗೆ ಕುಟಂಬದ ಒಡೆತನದ ಮಿಲಿಂದ್ ಕಾಲೇಜ್‌ನಲ್ಲಿ ಅಕ್ರಮ ನಡೆದಿದೆ. ಅರ್ಚನಾ ಎಂಬ ವಿದ್ಯಾರ್ಥಿನಿ ಬದಲಿಗೆ ಕಾನೂನು ವಿದ್ಯಾರ್ಥಿನಿಯೂ ಆಗಿರುವ ಕಾಂಗ್ರೆಸ್ ಕಾರ್ಯಕರ್ತೆ ಸಂಪೂರ್ಣಾ ಪಾಟೀಲ್ ಪರೀಕ್ಷೆ ಬರೆದಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ – vishwanews24

ದಲಿತ ಸೇನೆ ಕಾರ್ಯಕರ್ತರು ಕಾಲೇಜಿಗೆ ತೆರಳಿ ಅಕ್ರಮವನ್ನು ಪ್ರಶ್ನಿಸಿದಾಗ ಬದಲಿ ಅಭ್ಯರ್ಥಿ ಪರೀಕ್ಷೆ ಬರೆದಿರುವುದು ಬೆಳಕಿಗೆ ಬಂದಿದೆ. ಸದ್ಯ ಮಿಲಿಂದ್ ಶಾಲೆಯ ಪ್ರಾಂಶುಪಾಲರು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಸಂಪೂರ್ಣ ಪಾಟೀಲ್‌ಳನ್ನು ಬಂಧಿಸಿದ್ದಾರೆ.

Leave a Reply