ಪಿಹೆಚ್ ಡಿ ವಿದ್ಯಾರ್ಥಿನಿ ಚೈತ್ರಾ ನಾಪತ್ತೆ ಪ್ರಕರಣ ; ಪತ್ತೆಗಾಗಿ ಮನವಿ ಮಾಡಿದ ಅರುಣ್ ಪುತ್ತಿಲ – Vishwanews24
ಪಿಹೆಚ್ ಡಿ ವಿದ್ಯಾರ್ಥಿನಿ ಚೈತ್ರಾ ನಾಪತ್ತೆ ಪ್ರಕರಣ – ಪತ್ತೆಗಾಗಿ ಮನವಿ ಮಾಡಿದ ಅರುಣ್ ಪುತ್ತಿಲ
ಉಳ್ಳಾಲ: ದೇರಳಕಟ್ಟೆ ಯುನಿವರ್ಸಿಟಿಯ ಪಿಹೆಚ್ ಡಿ ವಿದ್ಯಾರ್ಥಿನಿ ಚೈತ್ರಾ ನಾಪತ್ತೆಯಾಗಿ 10 ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ.
ಆಕೆ ಬಿಟ್ಟು ಹೋದ ಸ್ಕೂಟರ್ ಸುರತ್ಕಲ್ ನಲ್ಲಿ ಪತ್ತೆಯಾಗಿರುವುದು ಬಿಟ್ಟರೆ ಬೇರೆನೂ ವಿಚಾರ ಗೊತ್ತಾಗಿಲ್ಲ. ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದ ಬಳಿಕ ತನಿಖೆಯೇನೋ ಚುರುಕುಗೊಂಡಿದೆ. ಆದರೆ ಪ್ರಗತಿ ಮಾತ್ರ ಕಂಡಿಲ್ಲ. ಚೈತ್ರಾ ಹೆಬ್ಬಾರ್ ಪುತ್ತೂರಿನವನೇ ಆದ ಪರಿಚಿತ ಯುವಕ ಶಾರೂಕ್ ಎಂಬಾತನ ಜೊತೆಗೆ ಹೋಗಿರುವುದು ಖಚಿತವಾಗಿದೆ.
ಆದರೆ ಎಲ್ಲಿ ಹೋಗಿದ್ದಾರೆ ಅನ್ನೋದು ಮಾತ್ರ ಗೊತ್ತಾಗಿಲ್ಲ. ಇದೀಗ ಇದೇ ವಿಚಾರಕ್ಕೆ ಹಿಂದೂ ಸಂಘಟನೆಯ ನಾಯಕ ಪುತ್ತೂರಿನ ಅರುಣ್ ಪುತ್ತಿಲ ಉಳ್ಳಾಲ ಠಾಣೆಗೆ ಭೇಟಿ ನೀಡಿದ್ದಾರೆ. ಚೈತ್ರಾ ಪತ್ತೆಗಾಗಿ ಪೊಲೀಸರ ಬಳಿ ಮನವಿ ಮಾಡಿದ್ದು, ಶೀಘ್ರವಾಗಿ ಆರೋಪಿ ಶಾರೂಕ್ ನನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
