ಪುತ್ತೂರು:ನಾನು ಯಾವುದೇ ಪಕ್ಷದ ಮುಖಂಡರೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ : ಅರುಣ್ ಕುಮಾರ್ ಪುತ್ತಿಲ – Vishwanews24
ಪುತ್ತೂರು: ನನ್ನ ಮೇಲೆ ಆರೋಪ ಮಾಡುವವರು ಪುತ್ತೂರು ಮಹಾಲಿಂಗೇಶ್ವರ ನಡೆಗೆ ಬರಲಿ , ಆಣೆ, ಪ್ರಮಾಣಕ್ಕೆ ಸಿದ್ಧ : ಅರುಣ್ ಕುಮಾರ್ ಪುತ್ತಿಲ ಸವಾಲು..
ನನ್ನ ವಿರುದ್ಧ ಮಾಡುತ್ತಿರುವ ಅಪಪ್ರಚಾರವನ್ನು ಉಳ್ಳಾಲ ಕ್ಷೇತ್ರದಲ್ಲಿ ಮಾಡಿದರೆ ಗೆಲ್ಲಬಹುದೇ ಹೊರತು ಪುತ್ತೂರಿನಲ್ಲಿ ಅಲ್ಲ..
ಪುತ್ತೂರು: ನಾನು ಯಾವುದೇ ಪಕ್ಷದ ಮುಖಂಡರೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ನನಗೆ ಯಾರೊಂದಿಗೆ ಹಣಕಾಸಿನ ವ್ಯವಹಾರವಿಲ್ಲ. ನನ್ನ ಮೇಲೆ ಆರೋಪ ಮಾಡುವವರು ಪುತ್ತೂರು ಮಹಾಲಿಂಗೇಶ್ವರ ನಡೆಗೆ ಬರಲಿ ಅಲ್ಲಿ ಆಣೆ, ಪ್ರಮಾಣಕ್ಕೆ ಸಿದ್ಧ ಎಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಸವಾಲು ಹಾಕಿದ್ದಾರೆ.
ಸಂಘದ ಶಾಖೆಯಲ್ಲಿ ಕೆಲಸ ಮಾಡಿದವರು ನನ್ನ ವಿರುದ್ಧ ಇಂದು ತೀರಾ ಕೇವಲ ವಿಚಾರಗಳನ್ನು ಮುಂದಿಟ್ಟು ಆರೋಪ ಮಾಡುತ್ತಿದ್ದಾರೆ. ಸಂಘ ಸಂಸ್ಕಾರದಲ್ಲಿ ಬೆಳೆದವರ ಬಾಯಲ್ಲಿ ಇಂತಹ ಮಾತುಗಳನ್ನು ಕೇಳುತ್ತಿರುವುದು ನನಗೆ ಆಶ್ಚರ್ಯ ತಂದಿದೆ ಎಂದರು.
ರಾಘವೇಶ್ವರ ಸ್ವಾಮೀಜಿ ಅವರು ನನಗೆ ಆಶೀರ್ವಾದ ನೀಡಿ ಕಳುಹಿಸಿದ್ದಾರೆ. ಸ್ವಾಮೀಜಿ ಅವರ ವಿಚಾರದಲ್ಲಿ ತಿರುಚಿದ ಮಾಹಿತಿಗಳನ್ನು ಪ್ರಚಾರ ಮಾಡಲಾಗುತ್ತಿದೆ ಎಂದರು. ನನ್ನ ಚಿಹ್ನೆ ಬ್ಯಾಟ್ ಆಗಿದ್ದರೂ ಚಿಹ್ನೆ ಕಮಲ ಎಂದು ಪ್ರಚಾರ ಮಾಡುತ್ತಿದ್ದಾರೆ.
ಇದೆಲ್ಲ ಹತಾಶೆ ಪ್ರತೀಕ. ನನ್ನ ವಿರುದ್ಧ ಮಾಡುತ್ತಿರುವ ಅಪಪ್ರಚಾರವನ್ನು ಉಳ್ಳಾಲ ಕ್ಷೇತ್ರದಲ್ಲಿ ಮಾಡಿದರೆ ಗೆಲ್ಲಬಹುದೇ ಹೊರತು ಪುತ್ತೂರಿನಲ್ಲಿ ಅಲ್ಲ ಎಂದರು.
