ಪುತ್ತೂರು: ಅನ್ಯಕೋಮಿನ ಯುವಕ ಹಾಗೂ ಯುವತಿಯನ್ನು ತಡೆದ ಗುಂಪು : ಪ್ರಕರಣ ದಾಖಲು -Vishwanews24

Featured, ದಕ್ಷಿಣ ಕನ್ನಡ

ಪುತ್ತೂರು: ಅನ್ಯಕೋಮಿನ ಯುವಕ ಹಾಗೂ ಯುವತಿಯನ್ನು ತಡೆದ ಗುಂಪು : ಪ್ರಕರಣ ದಾಖಲು -Vishwanews24

ಪುತ್ತೂರು : ಲಾಡ್ಜ್‌ಗೆ ಒಟ್ಟಿಗೆ ತೆರಳುತ್ತಿದ್ದ ಭಿನ್ನ ಕೋಮಿನ ಯುವಕ ಹಾಗೂ ಯುವತಿಯನ್ನು ತಂಡವೊಂದು ತಡೆದು ಪ್ರಶ್ನಿಸಿದ ಘಟನೆ ಸೆಪ್ಟೆಂಬರ್ 1ರಂದು ಕೆಎಸ್‌‌ಆರ್‌‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬಸ್ ನಿಲ್ದಾಣದ ಸಮೀಪದ ಲಾಡ್ಜ್ ಗೆ ಇಬ್ಬರೂ ಹಿಂದೂ ಯುವಕರು, ಮುಸ್ಲಿಂ ಯುವತಿ ತೆರಳುತ್ತಿದ್ದುದ್ದನ್ನು ನೋಡಿದ ಮುಸ್ಲಿಂ ಯುವಕರು ಅವರನ್ನು ತಡೆದು ಪ್ರಶ್ನಿಸಿದ್ದು, ಬಳಿಕ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಇನ್ನು ಪೊಲೀಸರು ಮೂವರನ್ನು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎನ್ನಲಾಗಿದೆ.

ಮಾನ್ವಿ ತಾಲ್ಲೂಕಿನ ಹನುಮಂತರಾಯ ಎಂಬ ಹಿಂದೂ ಯುವಕನಿಗೆ ಇನ್ಸ್ಟಾಗ್ರಾಮ್ ಮೂಲಕ ಪುತ್ತೂರಿನ ಮುಸ್ಲಿಂ ಮಹಿಳೆಯೊಂದಿಗೆ ಪರಿಚಯವಾಗಿದ್ದು, ಪರಿಚಯವು ಶೀಘ್ರದಲ್ಲೇ ಪರಸ್ಪರ ಪ್ರೀತಿಗೆ ತಿರುಗಿ ಹನುಮಂತರಾಯ ಯುವತಿಯನ್ನು ಭೇಟಿ ಮಾಡಲು ಪುತ್ತೂರಿಗೆ ಬಂದಿದ್ದಾನೆ ಎಂದು ತಿಳಿದುಬಂದಿದೆ.

ಹಲ್ಲೆ ಮಾಡಿದ ಬಗ್ಗೆ ಯುವಕ ನೀಡಿದ ದೂರಿನ ಆಧಾರದ ಮೇಲೆ, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.