ಪುತ್ತೂರು: ಕಾರು ಹಾಗು ದ್ವಿಚಕ್ರ ವಾಹನ ನಡುವೆ ಅಪಘಾತ – ಸವಾರ ಮೃತ್ಯು – Vishwanews24

Featured, ದಕ್ಷಿಣ ಕನ್ನಡ

ಪುತ್ತೂರು: ಕಾರು ಹಾಗು ದ್ವಿಚಕ್ರ ವಾಹನ ನಡುವೆ ಅಪಘಾತ – ಸವಾರ ಮೃತ್ಯು

ಪುತ್ತೂರು : ಕಾರು ಹಾಗು ದ್ವಿಚಕ್ರ ವಾಹನ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ಪುತ್ತೂರಿನ ಕಲ್ಲರ್ಪೆಯಲ್ಲಿ ಮುಂಜಾನೆ ನಡೆದಿದೆ.

ನೈತಾಡಿಯ ಇಸ್ಮಾಯಿಲ್‌ ಮೃತ ಬೈಕ್ ಸವಾರ.

ಇಸ್ಮಾಯಿಲ್‌ ಬೆಳಿಗ್ಗೆ ಕಲ್ಲರ್ಪೆಯಲ್ಲಿರುವ ತಮ್ಮ ಜಮೀನಿಗೆ ಹೋಗುವ ವೇಳೆ ಈ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡಿದ್ದ ಇಸ್ಮಾಯಿಲ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

ಇನ್ನು ಅಪಘಾತದ ರಭಸಕ್ಕೆ ಸ್ಕೂಟರ್‌ ನಜ್ಜುಗುಜ್ಜಾಗಿದ್ದು, ಅಪಘಾತಕ್ಕೊಳಗಾದ ಮಡಿಕೇರಿ ನೊಂದಾಯಿತ ಕಾರಿನಲ್ಲಿದ್ದವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮೃತ ಇಸ್ಮಾಯಿಲ್‌ ಪತ್ನಿ, ಮೂರ ಹೆಣ್ಣು ಮತ್ತು ಒಂದು ಗಂಡು ಮಕ್ಕಳನ್ನು ಅಗಲಿದ್ದಾರೆ.

Leave a Reply