ಪುತ್ರನಿಗೆ ‘ಅವ್ಯಾನ್ ದೇವ್’ಎಂದು ನಾಮಕರಣ ಮಾಡಿದ ನಿಖಿಲ್ ಕುಮಾರ್ ಸ್ವಾಮಿ – Vishwanews24

Featured, ರಾಜ್ಯ ನ್ಯೂಸ್

ಪುತ್ರನಿಗೆ ‘ಅವ್ಯಾನ್ ದೇವ್’ಎಂದು ನಾಮಕರಣ ಮಾಡಿದ ನಿಖಿಲ್ ಕುಮಾರ್ ಸ್ವಾಮಿ – Vishwanews24

ನಟ, ಯುವರಾಜಕಾರಣಿ ನಿಖಿಲ್ ಕುಮಾರ್ ಸ್ವಾಮಿ ಅವರು ತಮ್ಮ ಪುತ್ರನಿಗೆ ಆವ್ಯಾನ್ ದೇವ್ ಎಂದು ಹೆಸರಿಟ್ಟಿದ್ದಾರೆ.

ಆವ್ಯಾನ್ ದೇವ್ ಅಂದರೆ, ಅದು ದೇವರ ಹೆಸರು. ಗಣಪತಿಯ ಮತ್ತೊಂದು ಹೆಸರು ಕೂಡ. ಅಲ್ಲದೇ, ಅದೃಷ್ಟದಿಂದ ಜನಿಸಿದವನು ಎಂಬ ಅರ್ಥವನ್ನೂ ಇದು ಸೂಚಿಸುತ್ತದೆ. ಹಾಗಾಗಿ ಇಂಥದ್ದೊಂದು ಹೆಸರಿಟ್ಟಿದ್ದಾರೆ. ಮಗುವಿಗೆ ಒಂಬತ್ತು ತಿಂಗಳು ತುಂಬಿರುವ ಸಂದರ್ಭದಲ್ಲಿ ನಿಖಿಲ್ ಮತ್ತು ರೇವತಿ ದಂಪತಿ ತಮ್ಮ ಮಗುವಿಗೆ ಮುದ್ದಾದ ಹೆಸರಿಟ್ಟಿದ್ದಾರೆ.

ಶುಭ ಲಗ್ನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೊಮ್ಮಗನಿಗೆ ನಾಮಕರಣ ಮಾಡಲಾಯಿತು. ದೊಡ್ಡ ಗೌಡರ ಕುಟುಂಬ ಪ್ರಪೌತ್ರ ಜನನ ಶಾಂತಿ, ನಾಮಕರಣ, ಕನಕಭಿಷೇಕ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಮಾರಂಭದಲ್ಲಿ ದೇವೇಗೌಡರ ಇಡೀ ಕುಟುಂಬ ಹಾಜರಾಗಿತ್ತು.

Leave a Reply