ಪುಲ್ವಾಮಾ ದಾಳಿ : ಸಂಚು ರೂಪಿಸಿದ್ದ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಜಿಯನ್ನು ಹತ್ಯೆಗೈಯ್ದ ಭಾರತೀಯ ಯೋಧರು – Vishwanews24
ನವದೆಹಲಿ,- ಸಿಆರ್ಪಿಎಫ್ನ 40 ಯೋಧರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ ಜೈಷ್-ಇ-ಮೊಹಮ್ಮದ್ ಸಂಘಟನೆಯ ಕಮಾಂಡರ್ ಹಾಗೂ ಪುಲ್ವಾಮಾ ಘಟನೆಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಜಿ ಎಂಬಾತನನ್ನು ಭಾರತೀಯ ಯೋಧರು ಇಂದು ಹತ್ಯೆಗೈಯ್ದಿದ್ದಾರೆ.
ಕಳೆದ ಗುರುವಾರ ಪುಲ್ವಾಮಾದ ಆವಂತಿಪೊರ್ನಲ್ಲಿ ಬಾಂಬ್ ತುಂಬಿದ್ದ ವಾಹನವನ್ನು ಸ್ಫೋಟಿಸಲು ಈತ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.
ಮತ್ತೋರ್ವ ಪ್ರಮುಖ ಸಂಚುಕೋರ ಜೈಷ್-ಇ-ಮೊಹಮ್ಮದ್ ಕಮಾಂಡರ್ ಕಮ್ರಾನ್ನನ್ನು ಹಿಡಿಯಲು ಸೇನಾಪಡೆ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ..
ಈ ಮೂಲಕ ಭಾರತೀಯ ವೀರ ಯೋಧರ ಶ್ರಮದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ ಬೆನ್ನಲ್ಲೇ ಸೇನಾಪಡೆ ಬಹುದೊಡ್ಡ ಯಶಸ್ಸು ಸಾಧಿಸಿದೆ.
#JammuAndKashmir : Two terrorists have been killed during encounter between terrorists and security forces, in Pinglan area of Pulwama district. Operation still in progress.
— ANI (@ANI) February 18, 2019
ಈ ಇಬ್ಬರು ಕಳೆದ ಗುರುವಾರ ಪುಲ್ವಾಮಾದ ರಾಷ್ಟ್ರೀಯ ಹೆದ್ದಾರಿ ಆವಂತಿಪೊರ್ನಲ್ಲಿ ಸಂಭವಿಸಿದ ಘಟನೆಯ ಮಾಸ್ಟರ್ ಮೈಂಡ್ಗಳಾಗಿದ್ದಾರೆ.
ಈಗಾಗಲೇ ಅಬ್ದುಲ್ ರಸೀದ್ ಘಾಜಿ ಸೇನಾಪಡೆಗಳ ಗುಂಡಿಗೆ ಹತ್ಯೆಯಾಗಿರುವುದನ್ನು ಸೇನಾಪಡೆ ಖಚಿತಪಡಿಸಿದೆ. ಆದರೆ ತಲೆಮರೆಸಿಕೊಂಡಿರುವ ಕಮ್ರಾನ್ನನ್ನು ಜೀವಂತವಾಗಿ ಸೆರೆ ಹಿಡಿಯಲು ಪ್ರಯತ್ನ ಮುಂದುವರೆದಿದೆ.
ಜೈಷ್ ಎ ಮೊಹಮ್ಮದ್ ಭಯೋತ್ಪಾದನೆ ಸಂಘಟನೆಯ ಪ್ರಮುಖ ಸದಸ್ಯರಾಗಿದ್ದ ಇವರಿಬ್ಬರ ಹತ್ಯೆಯೊಂದಿಗೆ ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಂಡಂತಾಗಿದ್ದು, ಹುತಾತ್ಮ 40 ಯೋಧರಿಗೆ ಸೂಕ್ತ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದಂತಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಕ್ರಮಾನ್ನನ್ನು ಹಿಡಿಯಲು ಯೋಧರು ಇಡೀ ಪ್ರದೇಶವನ್ನು ಸುತ್ತುವರೆದಿದ್ದಾರೆ. ಗುರುವಾರದ ಘಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾರ್ವಜನಿಕ ಸಮಾರಂಭಗಳಲ್ಲಿ ಯೋಧರನ್ನು ಹತ್ಯೆಗೈದ ಉಗ್ರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಶಪಥ ಮಾಡಿದ್ದರು.
