ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನ ಡಿ.28ರಿಂದ ಫೆ.17ರವರೆಗೆ ಸಾರ್ವಜನಿಕರಿಗೆ ದೇವರ ದರ್ಶನ ಇಲ್ಲ -Vishwanews24

Featured, ದಕ್ಷಿಣ ಕನ್ನಡ

ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನ ಡಿ.28ರಿಂದ ಫೆ.17ರವರೆಗೆ ಸಾರ್ವಜನಿಕರಿಗೆ ದೇವರ ದರ್ಶನ ಇಲ್ಲ -Vishwanews24

ಬಂಟ್ವಾಳ: ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶದ ಅಂಗವಾಗಿ ದೃಢಕಲಶ ಆಗಬೇಕಿರುವ ನಿಟ್ಟಿನಲ್ಲಿ ಡಿ.28ರಿಂದ ಫೆ.17ರವರೆಗೆ ಸಾರ್ವಜನಿಕ ದೇವರ ದರ್ಶನ ಇರುವುದಿಲ್ಲ.

ಕೊರೊನಾ ಹಿನ್ನೆಲೆ, ಬ್ರಹ್ಮಕಲಶೋತ್ಸವ ನಡೆದ ಬಳಿಕ ಜೀಣೋದ್ಧಾರದ ನಂತರದ ಕಾರ್ಯಗಳು ಆಗಿರಲಿಲ್ಲ. ದೃಢಕಲಶ ಬಾಕಿ ಉಳಿದಿತ್ತು. ಪ್ರಸ್ತುತ ಸಾನಿಧ್ಯದಲ್ಲಿ ಸಣ್ಣ-ಪುಟ್ಟ ಜೀಣೋದ್ಧಾರದ ಕಾರ್ಯ ನಡೆಸಿ, ದೃಢಕಲಶ ಮಾಡಬೇಕಾಗಿದೆ. ಈ ಸಮಯದಲ್ಲಿ ದೇವರ ದರ್ಶನ ಇರುವುದಿಲ್ಲ.

ಈ ಅವಧಿಯಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸೀಮೆಯ ಒಳಗೆ ವಿಶೇಷ ಕಾರ್ಯಕ್ರಮ ಮಾಡುದಿದ್ದಲ್ಲಿ, ದೇವರಲ್ಲಿ ಪ್ರಾರ್ಥಿಸಿ ಮುಂದುವರೆಸಬಹುದಾಗಿದೆ ಎಂದು ಕ್ರೇತ್ರದ ಪ್ರಕಟಣೆ ತಿಳಿಸಿದೆ.