ಪೋಪ್ ಲಿಯೋ XIV ಅವರನ್ನು ಭೇಟಿಯಾದ ಉಡುಪಿ ಬಿಷಪ್ ಲೆಸ್ಲಿ ಸಿ ಡಿಸೋಜಾ – vishwanews24
ಪೋಪ್ ಲಿಯೋ XIV ಅವರನ್ನು ಭೇಟಿಯಾದ ಉಡುಪಿ ಬಿಷಪ್ ಲೆಸ್ಲಿ ಸಿ ಡಿಸೋಜಾ
ಉಡುಪಿ: ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕ್ರೈಸ್ತ ಜಗದ್ಗುರು ಲಿಯೋ XIV ಅವರನ್ನು ವ್ಯಾಟಿಕನ್ ನಗರದಲ್ಲಿ ಗುರುವಾರ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.
ಗುರುವಾರ ವಿಶ್ವದ ಎಲ್ಲಾ ನೂತನ ಬಿಷಪ್ ಗಳನ್ನು ಭೇಟಿಯಾದ ಪೋಪ್ ಲಿಯೋ ಅವರು ಬಳಿಕ ಪ್ರತ್ಯೇಕವಾಗಿ ಪ್ರತಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರುಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಲೆಸ್ಲಿ ಅವರು ಧರ್ಮಪ್ರಾಂತ್ಯದ ಪರವಾಗಿ ಪೋಪ್ ಅವರನ್ನು ಶಾಲು ಹಾಗೂ ಧರ್ಮಪ್ರಾಂತ್ಯದ ಪಾಲಕಿಯಾದ ಮಿಲಾಗ್ರಿಸ್ ಮಾತೆಯ ಪ್ರತಿಮೆಯೊಂದಿಗೆ ಗೌರವಿಸಿ ಉಡುಪಿ ಜಿಲ್ಲೆಯ ಪರವಾಗಿ ಶುಭಾಶಯಗಳನ್ನು ಕೋರಿದರು. ಉಡುಪಿ ಧರ್ಮಪ್ರಾಂತ್ಯದ ಕುರಿತು ಮಾಹಿತಿಯನ್ನು ಪೋಪ್ ಅವರಿಗೆ ಬಿಷಪ್ ಲೆಸ್ಲಿ ನೀಡಿದರು.
ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಮುಷ್ಕರ – vishwanews24
ಉಡುಪಿ ಹಾಗೂ ಭಾರತದ ಧರ್ಮಸಭೆಗೆ ತಮ್ಮ ಆಶೀರ್ವಾದವನ್ನು ತಿಳಿಸಿದ ಪೋಪ್ ಅವರಿಗೆ ಬಿಷಪ್ ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ಪವಿತ್ರ ಧರ್ಮಸಭೆ ಹಾಗೂ ಪೋಪ್ ಲಿಯೋ ಅವರಿಗೆ ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ವಿಶ್ವಾಸಿಗಳ ಪರವಾಗಿ ಪ್ರಾರ್ಥನೆಯ ಭರವಸೆಯನ್ನು ನೀಡಿದರು.
