ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ಧತೆ: ಈಶ್ವರಪ್ಪ – vishwanews24

Featured, ರಾಜ್ಯ ನ್ಯೂಸ್

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ಧತೆ : ಈಶ್ವರಪ್ಪ

ಶಿವಮೊಗ್ಗ: ಮಲೆನಾಡು ಜಿಲ್ಲ ಶಿವಮೊಗ್ಗ ಸಾಂಸ್ಕೃತಿಕ ಕೆಲಸದ ಮುಕಟವಿದ್ದ ಹಾಗೆ, ಮೊದಲ ಬಾರಿಗೆ ಮಲೆನಾಡಲ್ಲಿ ಕಂಬಳ ಆಯೋಜನೆ ಮಾಡಲಾಗುತ್ತಿದೆ. ಏ. 19 ಮತ್ತು 20 ರಂದು ಶಿವಮೊಗ್ಗದಲ್ಲಿ ಕಂಬಳ ನಡೆಯಲಿದೆ. ಕಂಬಳದಲ್ಲಿ 8 ರಿಂದ ಹತ್ತು ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದು ಮಾಜಿ ಡಿಸಿಎಂ ಕೆ. ಎಸ್ ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳ ಸೀಸನ್ ನ ಕೊನೆಯ 25 ನೇ ಕಂಬಳ ಶಿವಮೊಗ್ಗದಲ್ಲಿ ನಡೆಯುತ್ತಿದೆ. ಶಿವಮೊಗ್ಗ- ಭದ್ರಾವತಿ ನಡುವಿನ ಮಾಚೇನಹಳ್ಳಿ ತುಂಗಾಭದ್ರಾ ಜಂಕ್ಷನ್ ನಲ್ಲಿ ಕಂಬಳ ಆಯೋಜನೆ ಮಾಡಲಾಗಿದೆ ಎಂದರು.

ಕಾರ್ಕಳ : ಸುನೀಲ್‌ ಕುಮಾರ್ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್‌ ಪ್ರತಿಭಟನೆ – vishwanews24

ಫೆ. 10 ರಂದು ಮದ್ಯಾಹ್ನ 3 ಗಂಟೆಗೆ ಕಂಬಳ ನಡೆಯುವ ಸ್ಥಳದ ಭೂಮಿ ಪೂಜೆಯಿದೆ. ಸಾಂಸ್ಕೃತಿಕ ಪರಂಪರೆಗೆ ಇದೊಂದು ಮುಕುಟದ ಕಾರ್ಯಕ್ರಮವಾಗಲಿದೆ. ತುಳುನಾಡು -ಮಲೆನಾಡು ಸೇರಿ ಈ ಕಂಬಳ ಆಯೋಜನೆ ಮಾಡುತ್ತಿದ್ದೇವೆ. ನೂರು ಜೊತೆ ಚಾಂಪಿಯನ್ ಕೋಣಗಳು
ಕಂಬಳದಲ್ಲಿ ಭಾಗಿಯಾಗಲಿವೆ. ಕಬಂಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಲಿದೆ ಎಂದು ಈಶ್ವರಪ್ಪ ಮಾಹಿತಿ ನೀಡಿದರು.

Leave a Reply