ಪ್ರಧಾನಿಯವರಿಗೆ ದೇಶದ ಬಗ್ಗೆ ಕಾಳಜಿ ಇಲ್ಲ , ಕರೊನಾದಿಂದ ರಕ್ಷಣೆ ಮಾಡಿಕೊಳ್ಳುವುದು ಈಗ ನಿಮ್ಮದೇ ಕೈಯಲ್ಲಿದೆ : ರಾಹುಲ್ ಗಾಂಧಿ -Vishwanews24
ಪ್ರಧಾನಿಯವರಿಗೆ ದೇಶದ ಬಗ್ಗೆ ಕಾಳಜಿ ಇಲ್ಲ , ಕರೊನಾದಿಂದ ರಕ್ಷಣೆ ಮಾಡಿಕೊಳ್ಳುವುದು ಈಗ ನಿಮ್ಮದೇ
ಕೈಯಲ್ಲಿದೆ : ರಾಹುಲ್ ಗಾಂಧಿ -Vishwanews24
ನವದೆಹಲಿ: ಸದಾ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಮೆಂಟ್ ಮಾಡುತ್ತ, ಹಲವಾರು ಬಾರಿ ಕಮೆಂಟಿಗರಿಂದ ಟ್ರೋಲ್ ಆಗುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಬಾರಿಯೂ ಪುನಃ ಅದೇ ಕೆಲಸ ಮಾಡಿದ್ದಾರೆ.
ಇತ್ತ ಅಧಿವೇಶನ ಶುರುವಾಗುವ ಎರಡು ದಿನ ಮುಂಚಿತವಾಗಿಯೇ ತಾಯಿಯ ಜತೆ ಅಮೆರಿಕಕ್ಕೆ ಹಾರಿರುವ ರಾಹುಲ್ ಗಾಂಧಿ ಅಲ್ಲಿಂದ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುರೆಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಮೋದಿ ಅವರ ವಿರುದ್ಧ ಬರೆದಿದ್ದಾರೆ.
‘ಪ್ರಧಾನಿಯವರು ನವಿಲುಗಳ ಜತೆ ಬಿಜಿಯಾಗಿದ್ದಾರೆ, ಹೀಗಾಗಿ ದೇಶದ ಜನರು ನಿಮ್ಮ ಜೀವನವನ್ನು ನೀವೇ ನೋಡಿಕೊಳ್ಳಬೇಕು, ನಿಮ್ಮ ಜಾಗ್ರತೆಯಲ್ಲಿ ನೀವಿರಿ. ಕರೊನಾದಿಂದ ರಕ್ಷಣೆ ಮಾಡಿಕೊಳ್ಳುವುದು ಈಗ ನಿಮ್ಮದೇ ಕೈಯಲ್ಲಿದೆ, ಪ್ರಧಾನಿಯವರಿಗೆ ದೇಶದ ಬಗ್ಗೆ ಕಾಳಜಿ ಇಲ್ಲ’ ಎಂದಿದ್ದಾರೆ.
ಈ ವಾರ ಭಾರತದಲ್ಲಿ ಕೋವಿಡ್-19 ಪ್ರಕರಣಗಳು 50 ಲಕ್ಷ ಗಡಿ ದಾಟಬಹುದು. ಸಕ್ರಿಯ ಕೇಸುಗಳೇ 10 ಲಕ್ಷವಾಗಬಹುದು. ಒಬ್ಬ ಮನುಷ್ಯನ ಅಹಂಕಾರದ ಕೊಡುಗೆಯೇ ಸರಿಯಾದ ಯೋಜನೆ ಹಾಕಿಕೊಳ್ಳದೆ ಲಾಕ್ ಡೌನ್ ಹೇರಿಕೆ ಮಾಡಿದ್ದು, ಇದರಿಂದ ದೇಶದೆಲ್ಲೆಡೆ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ.
ಸ್ವಾವಲಂಬಿಗಳಾಗಿ, ಆತ್ಮ ನಿರ್ಭರರಾಗಿ ಎಂದು ಪ್ರಧಾನಿಯವರು ಹೇಳುತ್ತಾರೆ. ಅದರರ್ಥ ನಿಮ್ಮ ಜೀವನವನ್ನು ನೀವೇ ನೋಡಿಕೊಳ್ಳಿ ಎಂದು, ಏಕೆಂದರೆ ಪ್ರಧಾನಿಯವರು ತಮ್ಮ ನವಿಲುಗಳ ಜತೆ ಬಿಜಿಯಾಗಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
कोरोना संक्रमण के आँकड़े इस हफ़्ते 50 लाख और ऐक्टिव केस 10 लाख पार हो जाएँगे।
अनियोजित लॉकडाउन एक व्यक्ति के अहंकार की देन है जिससे कोरोना देशभर में फैल गया।
मोदी सरकार ने कहा आत्मनिर्भर बनिए यानि अपनी जान ख़ुद ही बचा लीजिए क्योंकि PM मोर के साथ व्यस्त हैं।
— Rahul Gandhi (@RahulGandhi) September 14, 2020
ಕಳೆದ ತಿಂಗಳು ಪ್ರಧಾನಿಯವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೊವನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಪ್ರಧಾನಿಯವರು ತಮ್ಮ ನವಿಲುಗಳ ಜತೆ ಸಮಯ ಕಳೆಯುತ್ತಿದ್ದಾರೆ. ಅವರಿಗೆ ದೇಶದ ನಾಗರಿಕರ ಬಗ್ಗೆ ಚಿಂತೆಯಿಲ್ಲ ಎಂದಿದ್ದಾರೆ.
ಸೋನಿಯಾ ಗಾಂಧಿಯವರ ನಿಯಮಿತ ವೈದ್ಯಕೀಯ ಪರೀಕ್ಷೆಗಾಗಿ ವಿದೇಶಕ್ಕೆ ಹೋಗಲಿರುವುದಾಗಿ ಕಾಂಗ್ರೆಸ್ ಮೂಲಗಳು ಹೇಳಿದ್ದು, ರಾಹುಲ್ ಗಾಂಧಿ ತಾಯಿಗೆ ಸಾಥ್ ನೀಡಿರುವುದಾಗಿ ಹೇಳಲಾಗಿದೆ. ಸೂಕ್ತ ಚಿಕಿತ್ಸೆ ಬಳಿಕ ತಾಯಿ-ಮಗ ಇಬ್ಬರೂ ಮರಳಿ ಬಂದು ಸಂಸತ್ತಿನ ಕಲಾಪದಲ್ಲಿ ಭಾಗಿಯಾಗಲಿದ್ದಾರೆ ಎಂದು ಪಕ್ಷ ಸ್ಪಷ್ಟಪಡಿಸಿದೆ.
ಸೋನಿಯಾಗಾಂಧಿ ಸುಮಾರು ಎರಡು ವಾರ ಅಮೆರಿಕದಲ್ಲೇ ಇರಲಿದ್ದಾರೆ. ಆದರೆ ರಾಹುಲ್ ಗಾಂಧಿಯವರು ಒಂದೇ ವಾರ ಇದ್ದು ವಾಪಸಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಸಂಸತ್ತಿನ ಕಲಾಪದಲ್ಲಿ ಬೇಗನೆ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೆವಾಲಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
