ಪ್ರಧಾನಿ ಮೋದಿ ಹೆಸರಿನಲ್ಲಿ ಅಭಿಮಾನಿಗಳಿಂದ ವಿಶೇಷ ಅನ್ನಸಂತರ್ಪಣೆ
ಉಡುಪಿ: ಹಿಂದು ಕ್ಯಾಲೆಂಡರ್ ಪ್ರಕಾರ ನಿನ್ನೆ ಅನುರಾಧಾ ನಕ್ಷತ್ರ ಪ್ರಾರಂಭವಾಗಿದ್ದು ಉಡುಪಿಯಲ್ಲಿ ಪ್ರಧಾನಿ ಮೋದಿ ಅಭಿಮಾನಿಗಳು ಅನ್ನಸಂತರ್ಪಣೆ ಹಮ್ಮಿಕೊಂಡಿದ್ದರು. ಅನುರಾಧಾ ಮೋದಿಯವರ ಜನ್ಮನಕ್ಷತ್ರವಾಗಿರುವ ಕಾರಣ ಅವರ ಹೆಸರಿನಲ್ಲಿ ಪೂಜೆ ಮಾಡಿಸಲಾಯಿತು. ಕಟಪಾಡಿಯ ಪ್ರಸಿದ್ಧ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಭಕ್ತರು ಅನ್ನಸಂತರ್ಪಣೆ ನಡೆಸಿದರು.
ಅಲ್ಲದೆ ಜಿಲ್ಲೆಯ ವಿವಿಧ ಪುಣ್ಯಕ್ಷೇತ್ರಗಳಲ್ಲಿ ಮೋದಿ ಹೆಸರಿನಲ್ಲಿ ಪೂಜೆ ನಡೆಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಮೋದಿಯವರು ಜಯಗಳಿಸಲಿ. ಬಿಜೆಪಿ ಸರ್ಕಾರವೇ ಆಡಳಿತಕ್ಕೆ ಬರುವಂತಾಗಲಿ ಎಂದು ಪ್ರಾರ್ಥಿಸಿದರು.
