ಪ್ರಬಲ ಭೂಕಂಪಕ್ಕೆ ನಲುಗಿದ ಟರ್ಕಿ ; ಸಂತ್ರಸ್ತರಿಗೆ ನೆರವಾಗಲು ಭಾರತ ಸಿದ್ಧ :  ಪ್ರಧಾನಿ ಮೋದಿ  – Vishwanews24

Featured, ರಾಜ್ಯ ನ್ಯೂಸ್

ಪ್ರಬಲ ಭೂಕಂಪಕ್ಕೆ ನಲುಗಿದ ಟರ್ಕಿ ; ಸಂತ್ರಸ್ತರಿಗೆ ನೆರವಾಗಲು ಭಾರತ ಸಿದ್ಧ :  ಪ್ರಧಾನಿ ಮೋದಿ 

ಬೆಂಗಳೂರು: ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಇಲ್ಲಿಯವರೆಗೂ 530 ಮಂದಿ ಸಾವನ್ನಪ್ಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಸಂತ್ರಸ್ತರಿಗೆ ನೆರವಾಗಲು ಭಾರತ ಮುಂದಾಗಿದೆ.

ಭೂಕಂಪದಿಂದ ಸಂತ್ರಸ್ತರಾಗಿರುವ ಜನರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬೆಂಗಳೂರು: ರಿಂಗ್ ರಸ್ತೆಗೆ ಪುನೀತ್ ರಾಜ್‌ ಕುಮಾರ್‌ ಹೆಸರು : ಫೆ.7ಕ್ಕೆ ಸಿಎಂ ಬೊಮ್ಮಾಯಿ ಉದ್ಘಾಟನೆ – Vishwanews24

ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್ 2023 ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ನಾವೆಲ್ಲರೂ ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪವನ್ನು ನೋಡುತ್ತಿದ್ದೇವೆ. ಅದು ಹಲವಾರು ಜನರನ್ನು ಬಲಿ ಪಡೆದಿದೆ. ಟರ್ಕಿಯ ಸಮೀಪವಿರುವ ದೇಶಗಳಲ್ಲಿಯೂ ಸಹ ಹಾನಿಗಳ ಬಗ್ಗೆ ಶಂಕಿಸಲಾಗಿದೆ. ಭಾರತದ ಕೋಟ್ಯಾಂತರ ಜನರು ಭೂಕಂಪ ಪೀಡಿತ ಜನರೊಂದಿಗೆ ಇದ್ದಾರೆ. ಭೂಕಂಪ ಪೀಡಿತ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ’ ಎಂದು ಅವರು ಹೇಳಿದರು.

ಮುಂಬಯಿ: ಜಾತಿಗಳು ಸೃಷ್ಟಿಯಾಗಿರುವುದು ದೇವರಿಂದಲ್ಲ, ಪುರೋಹಿತರಿಂದ : ಮೋಹನ್‌ ಭಾಗವತ್‌ – Vishwanews24

 

Leave a Reply