ಪ್ರವಾಹ ಪೀಡಿತ ಭಟ್ಕಳಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ – Vishwanews24
ಪ್ರವಾಹ ಪೀಡಿತ ಭಟ್ಕಳಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ
ಬೆಂಗಳೂರು: ಪ್ರವಾಹ ಪೀಡಿತ ಭಟ್ಕಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದು, ಸಂಜೆ 4 ಗಂಟೆಗೆ ಭಟ್ಕಳಕ್ಕೆ ತೆರಳಿ ನೆರೆ ಪೀಡಿತ ಪ್ರದೇಶಗಳನ್ನು ವೀಕ್ಷಣೆ ಮಾಡಲಿದ್ಧಾರೆ.
ಸಿಎಂ ಬೊಮ್ಮಾಯಿ ಗೋವಾಗೆ ಭೇಟಿ ನೀಡಿ ಅಲ್ಲಿಂದ ಭಟ್ಕಳಕ್ಕೆ ಆಗಮಿಸಲಿದ್ಧಾರೆ. ಭಟ್ಕಳ ತಾಲೂಕು ದಾಖಲೆ ಮಳೆಗೆ ತತ್ತರಿಸಿ ಹೋಗಿದೆ. ಸಿಎಂ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ಧಾರೆ. ಸಿಎಂಗೆ ಕಂದಾಯ ಸಚಿವ ಆರ್. ಅಶೋಕ್ ಸೇರಿ ಹಲವರು ಸಾಥ್ ನೀಡಲಿದ್ಧಾರೆ. ಒಂದೇ ದಿನ ಭಟ್ಕಳದಲ್ಲಿ 55 ಸೆಂಟಿ ಮೀಟರ್ ಮಳೆ ಸುರಿದು ಅವಾಂತರ ಸೃಷ್ಟಿ ಮಾಡಿದೆ. ಮುಟ್ಟಳ್ಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಮೃತಪಟ್ಟಿದ್ದರು. ನೂರಾರು ಮನೆಗಳು, ಅಂಗಡಿಗಳು, ಕೃಷಿ ಜಮೀನಿಗೆ ನೀರು ನುಗ್ಗಿದೆ
ಸುಬ್ರಹ್ಮಣ್ಯ ಮನೆ ಮೇಲೆ ಗುಡ್ಡ ಕುಸಿತ ಪ್ರಕರಣ : ಮೃತ ಮಕ್ಕಳ ನಿವಾಸಕ್ಕೆ ಸಚಿವ ಸುನೀಲ್ ಕುಮಾರ್ ಭೇಟಿ – Vishwanews24
