ಪ್ರವೀಣ್ ನೆಟ್ಟಾರು ಪತ್ನಿಯನ್ನು ಕೆಲಸದಿಂದ ಬಿಡುಗಡೆ ಮಾಡಿರುವುದು ಸರಿಯಲ್ಲ : ಸರಕಾರಕ್ಕೆ ನಳಿನ್ ಮನವಿ – Vishwanews24
ಪ್ರವೀಣ್ ನೆಟ್ಟಾರು ಪತ್ನಿಯನ್ನು ಕೆಲಸದಿಂದ ಬಿಡುಗಡೆ ಮಾಡಿರುವುದು ಸರಿಯಲ್ಲ : ಸರಕಾರಕ್ಕೆ ನಳಿನ್ ಮನವಿ
ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ಈ ಹಿಂದಿನ ರಾಜ್ಯ ಸರಕಾರ ಅನುಕಂಪದ ಆಧಾರದಲ್ಲಿ ಕೆಲಸ ಒದಗಿಸಿದ್ದು, ಅದನ್ನು ಮುಂದುವರಿಸಬೇಕು.
ಅವರನ್ನು ಕೆಲಸದಿಂದ ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದ್ದಾರೆ.
ಒಂದೊಮ್ಮೆ ರಾಜ್ಯ ಸರಕಾರ ಕೆಲಸ ಒದಗಿಸದಿದ್ದರೆ ಎನ್ಎಂಪಿಟಿ ಯಂತಹ ಸಂಸ್ಥೆಗಳಲ್ಲಿ ನೂತನ ಕುಮಾರಿ ಅವರಿಗೆ ಉದ್ಯೋಗ ಒದಗಿಸಲು ಪ್ರಯತ್ಜಿಸಲಾಗುವುದು ಎಂದವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಕಳ: ಜೋಕಾಲಿ ಆಟವಾಡುತ್ತಿದ್ದಾಗ ಕುತ್ತಿಗೆಗೆ ಸೀರೆ ಸುತ್ತಿಕೊಂಡು ಬಾಲಕಿ ಮೃತ್ಯು – Vishwanews24
ರಾಜ್ಯದ ಕಾಂಗ್ರೆಸ್ ಸರಕಾರ ಘೋಷಿಸಿದ ಉಚಿತ ಗ್ಯಾರೆಂಟಿ ಯೋಜನೆಗಳು ಜಾರಿಗೆ ಬಾರದಿರುವುದರಿಂದ ಸರಕಾರಿ ನೌಕರರಿಗೆ ಸಮಸ್ಯೆಯಾಗಿದೆ. ಒಂದು ತಿಂಗಳು ಕಾದು ನೋಡುತ್ತೇವೆ. ಬಳಿಕ ಹೋರಾಟ ನಡೆಸುತ್ತೇವೆ.
ಶಾಸಕರಾದ ಹರೀಶ್ ಪೂಂಜಾ, ಆಶ್ವತ್ಥ ನಾರಾಯಣ ಮೇಲೆ ಕೇಸು ದಾಖಲಿಸುವ ಮೂಲಕ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ನಳಿನ್ ಆರೋಪಿಸಿದರು.
