ಪ್ರವೀಣ್ ಹತ್ಯೆ ಪ್ರಕರಣ: ಇನ್ನಿಬ್ಬರು ಆರೋಪಿಗಳು ಬೆಳ್ಳಾರೆಯ SDPI ಪದಾಧಿಕಾರಿಗಳು – Vishwanews24
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಇನ್ನಿಬ್ಬರು ಆರೋಪಿಗಳಾದ ಅಬ್ದುಲ್ ಹ್ಯಾರಿಸ್, ಶೇಕ್ ಸದ್ದಾಂ ಹುಸೇನ್ ಬೆಳ್ಳಾರೆಯ SDPI ಪದಾಧಿಕಾರಿಗಳು
ಸುಳ್ಯ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಬಂಧಿಸಿರುವ ಝಾಕೀರ್ ಹಾಗೂ ಶಫೀಕ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು ಇಂದು ಸಂಜೆ ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಇನ್ನಿಬ್ಬರು ಆರೋಪಿಗಳಾದ ಅಬ್ದುಲ್ ಹ್ಯಾರಿಸ್, ಶೇಕ್ ಸದ್ದಾಂ ಹುಸೇನ್ ಜೊತಗೆ ಝಾಕೀರ್ ಗೆ ದಿನಾಂಕ 12-08- 2022ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ಪೊಲೀಸರ ಕೋರಿಕೆಯ ಮೇರೆಗೆ ಶಫೀಕ್ ನನ್ನು ದಿನಾಂಕ 06-08-2022 ತನಕ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಆರೋಪಿಗಳಾದ ಅಬ್ದುಲ್ ಹ್ಯಾರಿಸ್, ಶೇಕ್ ಸದ್ದಾಂ ಹುಸೇನ್ ಪಿ.ಎಫ್. ಐ ಸಂಘಟನೆ ಹಾಗೂ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರಾಗಿದ್ದಾರೆ . ಅಬ್ದುಲ್ ಹ್ಯಾರಿಸ್ ಈ ಹಿಂದೆ ವಿದೇಶದಲ್ಲಿದ್ದು ಸದ್ಯ ಊರಿನಲ್ಲೇ ಇದ್ದ. ಶೇಕ್ ಸದ್ದಾಮ್ ಹುಸೇನ್ ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ಹೊಂದಿದ್ದಾನೆ.ಸದ್ದಾಂ ಹುಸೇನ್ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ಸುಳ್ಯ ವಿಧಾನಸಭಾ ಕ್ಷೇತ್ರದ ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಬೂತ್ ಸಮಿತಿಯ ಅಧ್ಯಕ್ಷನಾಗಿದ್ದಾನೆ. ಅಬ್ದುಲ್ ಹ್ಯಾರಿಸ್ ಕೋಶಾಧಿಕಾರಿಯಾಗಿ ಗುರುತಿಸಿಕೊಂಡಿದ್ದಾನೆ.
ಮಂಗಳೂರು : ಮೇರಿ ಹಿಲ್ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವ – Vishwanews24
